ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಬಾಂಬ್ ಹಾಕಿದ್ದ ಕೆಂಪಣ್ಣ ಅರೆಸ್ಟ್ -ಬಳಿಕ ಏನೆಲ್ಲಾ ಆಯ್ತು..?

ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಬಾಂಬ್ ಹಾಕಿದ್ದ ಕೆಂಪಣ್ಣ ಅರೆಸ್ಟ್ -ಬಳಿಕ ಏನೆಲ್ಲಾ ಆಯ್ತು..?

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮೊಟ್ಟ ಮೊದಲಿಗೆ ಪರ್ಸಂಟೇಜ್ ಬಾಂಬ್ ಸಿಡಿಸಿದವ್ರು ಕೆಂಪಣ್ಣ. ಅದ್ರಲ್ಲೂ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಕಮೀಷನ್ ಬೇಡಿಕೆ ಇಟ್ಟಿದ್ದಾರೆ ಅಂತಾ ನೇರವಾಗಿ ಆರೋಪ ಮಾಡಿದ್ದರು. ಇದ್ರಿಂದ ಸಿಟ್ಟಿಗೆದ್ದಿದ್ದ ಮುನಿರತ್ನ ಕಾನೂನು ಸಮರಕ್ಕಿಳಿದಿದ್ದರು.

ಮುನಿರತ್ನ ಹಾಕಿದ ಮಾನನಷ್ಟ ಮೊಕದ್ದಮೆ ಹಿನ್ನೆಲೆ ಕೆಂಪಣ್ಣ ಸೇರಿದಂತೆ ಐವರನ್ನು ಅರೆಸ್ಟ್ ಮಾಡಲಾಗಿದೆ.

40 ಪರ್ಸೆಂಟ್ ಕಮೀಷನ್. ಈ ಒಂದು ಗಂಭೀರ ಆರೋಪ ರಾಜ್ಯ ಬಿಜೆಪಿ ಸರ್ಕಾರದ ಬುಡವನ್ನೇ ಅಲ್ಲಾಡಿಸಿತ್ತು. ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಕೊಡದಿದ್ದರೆ ಬಿಲ್ ಪಾಸ್ ಆಗಲ್ಲ ಅಂತಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದರು. ಇದ್ರ ಬೆನ್ನಲ್ಲೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕಮೀಷನ್ ಕರಾಳತೆಗೆ ಸಾಕ್ಷಿಯಾಗಿತ್ತು. ಇದೇ ಅಸ್ತ್ರ ಇಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದೀಗ ಇದೇ ಕೇಸ್ ಸಂಬಂಧ ಆರೋಪ ಮಾಡಿದ್ದ ಕೆಂಪಣ್ಣರನ್ನೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.