ಹಿಂದೂ ಹಾಗೂ ಹಿಂದುತ್ವಕ್ಕೆ ಏನು ವ್ಯತ್ಯಾಸವಿಲ್ಲ; ರಾಹುಲ್ ಗಾಂಧಿ ಕುಂಕುಮ ಹಚ್ಚಿಕೊಂಡು ನಾಟಕ ಮಾಡುತ್ತಾರೆ; ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ವಿವಿಧ ಪಕ್ಷಗಳ ನಾಯಕರಿಂದ ಆರೋಪ - ಪ್ರತ್ಯಾರೋಪ ಮುಂದುವರೆದಿದೆ. ಇದೀಗ ಪ್ರಹ್ಲಾದ್ ಜೋಶಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಆಚರಣೆಗಳನ್ನು ಮಾಡುತ್ತೇನೆ ಆದರೆ ಹಿಂದುತ್ವವಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಹಿಂದೂ ಹಾಗೂ ಹಿಂದುತ್ವಕ್ಕೆ ಏನು ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ. ಹಿಂದು ದ್ವೇಷಿ ಸಿದ್ದರಾಮಯ್ಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ , ಸಿದ್ದರಾಮಯ್ಯನವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅವರೇ ಕುಂಕುಮ ಹಚ್ಚಿಕೊಂಡು ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.