ಚಿಕ್ಕಮಗಳೂರಿನಲ್ಲಿ ಬೈಕ್ ಸವಾರರ ಮೇಲೆ ದೈತ್ಯ ಕಾಡುಕೋಣ ಅಟ್ಯಾಕ್ : ಇಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರಿನಲ್ಲಿ ಬೈಕ್ ಸವಾರರ ಮೇಲೆ ದೈತ್ಯ ಕಾಡುಕೋಣ ಅಟ್ಯಾಕ್ : ಇಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಬೈಕ್ ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ.

ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ್ದು, ಬೈಕ್ ಸವಾರರರಾದ ದಿಲೀಪ್ ಮತ್ತು ಆಶಾ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇವರಿಬ್ಬರು ತಡರಾತ್ರಿ ಹೀರೋ ಹೊಂಡಾ ಬೈಕ್ ನಲ್ಲಿ ಮತ್ತಿಗಟ್ಟೆ ಸಮೀಪದ ಕಲ್ಯಾಣ ಗದ್ದೆಗೆ ತೆರಳುತ್ತಿದ್ದಾಗ ಕಾಡುಕೋಣ ಧಿಡೀರ್ ದಾಳಿ ನಡೆಸಿದೆ. ಗಾಯಾಳುಗಳನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.