ಅಗ್ರಿಗೇಟರ್ ಸಂಸ್ಥೆಯಿಂದ ; ಓಲಾ, ಉಬರ್ ಆಟೋ ಪ್ರಯಾಣ ದರ ಇಳಿಕೆ

ಬೆಂಗಳೂರು:ಸರಕಾರ ನಿಗದಿಪಡಿಸಿದ ಮೂಲದರಕ್ಕಿಂತ ಶೇ.10 ರಷ್ಟು ಮಾತ್ರ ಹೆಚ್ಚು ದರ ಪಡೆದು ಸೇವೆ ಒದಗಿಸಬಹುದು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಅಗ್ರಿಗೇಟರ್ ಸಂಸ್ಥೆಗಳು ದರ ಇಳಿಕೆ ಮಾಡಿವೆ. ಆದರೆ, ಪೀಕ್ ಹವರ್‌ಗಳಲ್ಲಿ ಸರ್ಜ್ ದರ ವಿಧಿಸುವುದರಿಂದ ಕನಿಷ್ಠ ದರ ಪಾಲನೆಯಾಗುತ್ತಿಲ್ಲ ಎಂದು ಕೆಲ ಪ್ರಯಾಣಿಕರು ದೂರಿದ್ದಾರೆ.
ಸರಕಾರದ ಎಚ್ಚರಿಕೆಗೆ ಕುಗ್ಗದ ಅಗ್ರಿಗೇಟರ್ ಸಂಸ್ಥೆಗಳು ಹೈಕೋರ್ಟ್ ಮಧ್ಯ ಪ್ರವೇಶದ ಬಳಿಕ ಆಟೋಗಳ ಕನಿಷ್ಠ ಪ್ರಯಾಣ ದರ ಇಳಿಕೆ ಮಾಡಿವೆ. 100 ರೂ.ಗಿಂತಲೂ ಹೆಚ್ಚು ಕನಿಷ್ಠ ಪ್ರಯಾಣದರ ವಿಧಿಸುತ್ತಿದ್ದ ಓಲಾ, ಉಬರ್, ಸಂಸ್ಥೆಗಳು ಈ ದರವನ್ನು 35 ರೂ.ಗೆ ಇಳಿಸಿವೆ.
ತನ್ನ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಆಟೋ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಸಾರಿಗೆ ಇಲಾಖೆ ಅಗ್ರಿಗೇಟರ್ ಸಂಸ್ಥೆಗಳಿಗೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ಬಳಿಕ ಕೆಲ ದಿನ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಅಗ್ರಿಗೇಟರ್ ಸಂಸ್ಥೆಗಳು ಈಗ ದರವನ್ನು ಕೊಂಚ ಇಳಿಕೆ ಮಾಡಿವೆ.