ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ರಿಲೀಸ್, ಗುಂಡ್ಲುಪೇಟೆಯಲ್ಲಿ ಇಂದು ಸಹ ಭಾರಿ ಗಲಾಟೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕೋಟಿಗೊಬ್ಬ 3 ಚಿತ್ರಕ್ಕಾಗಿ ಇಂದು ಸಹ ಬಾರಿ ಗಲಾಟೆಯಾಗಿದೆ, ಗುಂಡ್ಲುಪೇಟೆಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಕಲ್ಲು ತೂರಾಟ ನಡೆದಿದೆ. ಕಾರಾಣಾಂತರದಿಂದ ಇಂದು ಸಹ ಗುಂಡ್ಲುಪೇಟೆಯಲ್ಲಿ 'ಕೋಟಿಗೊಬ್ಬ 3' ಸಿನಿಮಾ ಪ್ರದರ್ಶನವಾಗದಿರೋದು ಈ ಕಲ್ಲು ತೂರಾಟಕ್ಕೆ ಕಾರಣವಾಗಿದೆ.ಚಿತ್ರ ಬಿಡುಗಡೆ ಕಾರಣ ಮುಂಜಾನೆಯಿಂದಲೇ ಸಿನಿಮಾ ಮಂದಿರಕ್ಕೆ ಬಂದು ಕಿಚ್ಚನ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಸಾಕಷ್ಟು ಸಮಯದ ನಂತರ ಚಿತ್ರಮಂದಿರದವರು ಪರವಾನಗಿ ಇಲ್ಲ ಎಂದು ನಾಮಫಲಕ ಹಾಕಿದ್ದಾರೆ. ಇದರಿಂದ ಕಿಚ್ಚನ ಅಭಿಮಾನಿಗಳು ನಿರಾಶರಾಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ಕಿಚ್ಚನ ಹಲವು ಅಭಿಮಾನಿಗಳಿಂದ ಕಲ್ಲು ತೂರಾಟ ಸಹ ನಡೆದಿದೆ. ಇದರಿಂದಾಗಿ ಚಿತ್ರಮಂದಿರದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಗಲಾಟೆಯ ನಂತರ ಚಿತ್ರ ವೀಕ್ಷಿಸಲಾಗದ ಕಿಚ್ಚನ ಅಭಿಮಾನಿಗಳು, ಬಂದ ದಾರಿಗೆ ಸುಂಕವಿಲ್ಲದಂತೆ ಬೇಸರಗೊಂಡು ಮನೆಗೆ ಹಿಂತಿರುಗಿದ್ದಾರೆ.