ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ
ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದೆ. ಘಟಾನುಘಟಿ ನಾಯಕರೇ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿದ್ದಾರೆ. ಆದರೆ ಇಲ್ಲಿ ಓರ್ವ ಕಾರ್ಯಕರ್ತ ಬಿಜೆಪಿ ಪಕ್ಷ (BJP) ತೊರೆದು ಕಾಂಗ್ರೆಸ್​​ (Congress) ಸೇರಿದ್ದಕ್ಕೆ ಮನೆಯ ಕಾಂಪೌಂಡ್​ ಧ್ವಂಸ ಮಾಡಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕು ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಅಲ್ಲದೆ, ಕಾಂಪೌಂಡ್ ತೆರವುಗೊಳಿಸುವ ವೇಳೆ ಮಹಿಳೆಗೆ (Women) ನಿಂದಿಸಿ ಬಿಜೆಪಿ ಪಕ್ಷದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹಲ್ಲೆ ಮಾಡಿರುವ ಅಮಾನವೀಯ ಘಟನೆಯೂ ನಡೆದಿದ್ದು, ಮಹಿಳೆ ಮೇಲೆ ಹಲ್ಲೆ ಮಾಡಿ ಕೆಳಕ್ಕೆ ಬೀಳಿಸುವ ದೃಶ್ಯಗಳು ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಏನಿದು ಪ್ರಕರಣ?

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕಗೊಲ್ಲರಹಟ್ಟಿಯ ನಿವಾಸಿಯಾಗಿದ್ದ ನವೀನ್​ ಎಂಬ ಯುವಕ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್​​ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರಂತೆ. ನವೀನ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಕ್ಕೆ ಮಾಚೋಹಳ್ಳಿ ಜಿಲ್ಲಾ ಪಂಚಾಯ್ತಿ ಮಾಜಿ ಬಿಜೆಪಿ ಸದಸ್ಯ ಉಮೇಶ್‌ ಆಕ್ರೋಶಗೊಂಡಿದ್ದರಂತೆಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಕಪಾಳಮೋಕ್ಷ ಮಾಡಿದ ಮಹಿಳೆ

ಇದರ ನಡುವೆ ಮೂರು ದಿನಗಳ ಹಿಂದೆಯಷ್ಟೇ ನವೀನ್​ ತಮ್ಮ ಮನೆಯ ಸುತ್ತಾ ಕಾಂಪೌಂಡ್​​ ನಿರ್ಮಾಣ ಮಾಡಿದ್ದರಂತೆ. ಆದರೆ ಕಾಂಪೌಂಡ್​ ನಿರ್ಮಾಣ ಮಾಡಿದ್ದ ನಿವೇಶನ ಸರ್ಕಾರಕ್ಕೆ ಸೇರಿದ್ದು ಎನ್ನಲಾಗಿದೆ.

ಇದರಿಂದ ಇಂದು ಏಕಾಏಕಿ ಕಾಂಪೌಂಡ್​ ತೆರವು ಮಾಡಲಾಗಿದೆ. ಈ ವೇಳೆ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದಿದ್ದ ಉಮೇಶ್ ಮಹಿಳೆಗೆ ನಿಂದನೆ ಮಾಡಿದ್ದಾರೆ. ಕಾಂಪೌಂಡ್​ ಹಾಕಿರುವ ಜಮೀನು ನಿನ್ನ ಗಂಡನದ್ದ ಅಥವಾ ನಿನ್ನ ಅಪ್ಪನದ್ದ. ಅಂಗನವಾಡಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದೀಯಾ, ಹೇಗೆ ನಿನ್ನ ಮನೆಯನ್ನು ಉಳಿಸಿಕೊಳ್ಳುತ್ತೀಯಾ ನಾನು ನೋಡುತ್ತೇನೆ ಎಂದು ಅವಾಜ್​ ಹಾಕಿ, ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ.

ಹಲ್ಲೆ ಮಾಡುವ ವಿಡಿಯೋ ಮೊಬೈಲ್​ನಲ್ಲಿ ಸೆರೆ

ಅವಾಚ್ಯ ಶಬ್ದ ಬಳಸಿ ಹಲ್ಲೆ ಮಾಡಲು ಮುಂದಾದ ಕಾರಣ ಆಕ್ರೋಶಗೊಂಡ ನವೀನ್​ ತಾಯಿ ರಂಗಮ್ಮ ಎಂಬವರು ಬಿಜೆಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಿಜೆಪಿ ಮುಖಂಡ ಹಾಗೂ ಆತನ ಬೆಂಬಲಿಗರು ಮಹಿಳೆ ಮೇಲೆ ಹಲ್ಲೆ ಮಾಡಿ ನಡುರಸ್ತೆಯಲ್ಲೇ ಕೆಳಕ್ಕೆ ಬೀಳಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾಕಿಸ್ತಾನ ಉಳಿಯಲು ನರೇಂದ್ರ ಮೋದಿ ಬೇಕು ಅಂತಾ ಪ್ರಾರ್ಥನೆ ಮಾಡುತ್ತಾರೆ

ಬೆಂಗಳೂರಿನ (Bengaluru) ಬ್ಯಾಟರಾಯನಪುರ (Byatarayanapura ) ವಿಧಾನಸಭಾ ಕ್ಷೇತ್ರದ ಸಹಕಾರನಗರದಲ್ಲಿ (Sahakar Nagar) ಬಿಜೆಪಿ ಯುವ ಸಂಕಲ್ಪ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಬಿಜೆಪಿ (BJP) ರಾಜ್ಯಾಧ್ಯಕ್ಷ ಕಟೀಲ್, ಸಂಸದ ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸದಾನಂದಗೌಡ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದವರು ಇನ್ನೂ ಕ್ಷೇತ್ರ ಹುಡುಕಾಟ ನಡೆಸಿದ್ದಾರೆ. ಈಗ ಕೋಲಾರದಿಂದಲೂ ಅವರನ್ನು ಎತ್ತಂಗಡಿ ಮಾಡಿಸುವ ಕೆಲಸ ಆಗುತ್ತಿದೆ ಅಂತ ಲೇವಡಿ ಮಾಡಿದ್ದಾರೆನಳಿನ್​​ ಕುಮಾರ್ ಕಟೀಲ್ ಮಾತನಾಡಿ, ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ. ಯಡಿಯೂರಪ್ಪ ನಾಯಕತ್ವದಲ್ಲಿ ಬ್ಯಾಟರಾಯನಪುರ ಗೆಲ್ಲುವ ಮೂಲಕ ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ಭಯೋತ್ಪಾದಕರ, ಭ್ರಷ್ಟಾಚಾರಿಗಳ ರಾಷ್ಟ್ರ ಆಯಿತು. ಆಗ ಕುಟುಂಬವಾದಕ್ಕೆ ಮನ್ನಣೆ ಕೊಡುವ ಕೆಲಸ ಆಯಿತು. ಪಾಕಿಸ್ತಾನದ ಜನರು ಮಸೀದಿಯ ಮುಂದೆ ನಿಂತು ಪಾಕಿಸ್ತಾನ ಉಳಿಯಲು ನರೇಂದ್ರ ಮೋದಿ ಬೇಕು ಅಂತಾ ಪ್ರಾರ್ಥನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.