ಫಿಫಾ ವರ್ಲ್ಡ್ ಕಪ್: ಜರ್ಮನಿಗೆ ಜಪಾನ್ ಕಿಕ್

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ಅಚ್ಚರಿಗಳ ಮೇಲೆ ಅಚ್ಚರಿ ನೀಡುತ್ತಿದೆ. ಬುಧವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡ 2-1 ಗೋಲುಗಳಿಂದ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಗೆ ಆಘಾತ ನೀಡಿದೆ. 2ನೇ ಅವಧಿಯ ಕೊನೆ ಹಂತದಲ್ಲಿ ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೇರುವ ಅಂಡರ್‌ಡಾಗ್ ಎನಿಸಿಕೊಂಡಿದ್ದ ಜಪಾನ್ ತಂಡ ಎರಡು ಗೋಲುಗಳನ್ನು ಸಿಡಿಸುವ ಮೂಲಕ 2014ರ ಫಿಫಾ ವಿಶ್ವಕಪ್‌ನ ಚಾಂಪಿಯನ್ ತಂಡವನ್ನು ಬಗ್ಗು ಬಡಿದಿದೆ.