ಗವಿಸಿದ್ದೇಶ್ವರ ಮಠದ ಮಹಾರಥೋತ್ಸವ ಉದ್ಘಾಟನೆಗೆ ಜಗ್ಗಿ ವಾಸುದೇವ್
ಕೊಪ್ಪಳ: ಜ.8ರಂದು ನಡೆಯಲಿರುವ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವಕ್ಕೆ ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಚಾಲನೆ ನೀಡಲಿದ್ದಾರೆ. ಜಾತ್ರೆಯ ಸಮಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಾತ್ರೆ ಸ್ಥಳದಲ್ಲಿ ತುರ್ತು ಸೇವಾ ಘಟಕ ಪ್ರಾರಂಭಿಸಲು, ಈ ಕರ್ತವ್ಯಕ್ಕೆ ತಜ್ಞ ವೈದ್ಯರನ್ನು & ಶುಶ್ರೂಕಿಯರನ್ನು ನಿರಂತರವಾಗಿ ನಿಯೋಜಿಸುವಂತೆ ತಿಳಿಸಿದ್ದಾರೆ.