ಭಾರತ್‌ ಗೌರವ್‌ ರೈಲು; ಪ್ರಯಾಣ ದರ ಇಳಿಕೆಗೆ ಚಿಂತನೆ

ಭಾರತ್‌ ಗೌರವ್‌ ರೈಲು; ಪ್ರಯಾಣ ದರ ಇಳಿಕೆಗೆ ಚಿಂತನೆ

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪರಿಚಯಿಸಲಾದ ಭಾರತ್ ಗೌರವ್ ರೈಲುಗಳ ಪ್ರಯಾಣ ದರವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಪ್ರಯಾಣ ದರವನ್ನು ಕಡಿಮೆ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಕೆಳ ಮಧ್ಯಮ ವರ್ಗದ ಯಾತ್ರಾರ್ಥಿಗಳ ಪಾಲಿಗೆ ಪ್ರಯಾಣದರ ದುಬಾರಿ ಎನಿಸಿದ ಕಾರಣ ಸೀಟು ಭರ್ತಿ ಆಗುತ್ತಿಲ್ಲ. ಹೀಗಾಗಿ ಪ್ರಯಾಣ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.