ಸೋಷಿಯಲ್ ಮೀಡಿಯಾದಲ್ಲಿ 'ಸಿಎಂ ಯೋಗಿ' ಕ್ರೇಜ್ ; ರಾಹುಲ್ ಸೇರಿ ಈ ನಾಯಕರಿಗಿಂತ್ಲು 'ಯೋಗಿ'ಗಿದ್ದಾರೆ ಹೆಚ್ಚು ಫಾಲೋವರ್ಸ್

ನವದೆಹಲಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವ್ರು ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ನಾಯಕರನ್ನ ಹಿಂದಿಕ್ಕಿದ್ದು, ಸಿಎಂ ಯೋಗಿ ಅವರ ಕ್ರೇಜ್ ಅನುಯಾಯಿಗಳಲ್ಲಿ ಉಳಿದಿದೆ.
ಟ್ವಿಟ್ಟರ್‍ನಲ್ಲಿ ಸಿಎಂ ಯೋಗಿ ಅವರ ಅನುಯಾಯಿಗಳ ಸಂಖ್ಯೆ 2 ಕೋಟಿ 25 ಲಕ್ಷಕ್ಕೆ ಏರಿದ್ದು, ಟ್ವಿಟ್ಟರ್'ನಲ್ಲಿ ರಾಹುಲ್ ಗಾಂಧಿಗಿಂತ ಸಿಎಂ ಯೋಗಿ ಹೆಚ್ಚು ಜನಪ್ರಿಯರಾಗಿದ್ದಾರೆ.
ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದಲ್ಲಿ ಪ್ರಮುಖ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್, ಅನುಯಾಯಿಗಳ ವಿಷಯದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವ್ರನ್ನ ಹಿಂದಿಕ್ಕಿದ್ದಾರೆ.
ಇನ್ನು ಪ್ರಿಯಾಂಕಾ ಗಾಂಧಿ ಟ್ವಿಟ್ಟರ್'ನಲ್ಲಿ ಸಿಎಂ ಯೋಗಿಗಿಂತ ತುಂಬಾ ಹಿಂದಿದ್ದು, ಅವ್ರು 51 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನ ಹೊಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್'ನಲ್ಲಿ 22 ಮಿಲಿಯನ್ ಅನುಯಾಯಿಗಳನ್ನ ಹೊಂದಿದ್ದಾರೆ. ಟ್ವಿಟರ್'ನ ಜನಪ್ರಿಯ ಅಖಿಲೇಶ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಅನುಯಾಯಿಗಳ ಸಂಖ್ಯೆ 1 ಕೋಟಿ 76 ಲಕ್ಷ ಆಗಿದೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟ್ವಿಟ್ಟರ್‍ನಲ್ಲಿ ಅನುಯಾಯಿಗಳ ವಿಷಯದಲ್ಲಿ ಕೊನೆಯ ಸ್ಥಾನದಲ್ಲಿದ್ದು, ಮಾಯಾವತಿ ಟ್ವಿಟ್ಟರ್'ನಲ್ಲಿ 29 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನ ಹೊಂದಿದ್ದಾರೆ.