ಮೋದಿ ತೊಟ್ಟ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ

ಮೋದಿ ತೊಟ್ಟ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ತೊಟ್ಟ ಪೇಟವನ್ನು ಮೈಸೂರಿನ ಮೋದಿ ಅಭಿಮಾನಿಯೊಬ್ಬರು ಹರಾಜಿನ ಮೂಲಕ ಖರೀದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕೊಟ್ಟ ಸ್ಮರಣಿಕೆಗಳನ್ನು ಅಕ್ಟೋಬರ್ 14ರಂದು ಈ ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ಮೈಸೂರಿನ ಶ್ರೀರಾಂಪುರ ನಿವಾಸಿ ಶ್ರೀಕಂಠಕುಮಾರ್ 3,300 ರೂಪಾಯಿಗೆ ಒಂದು ಪೇಟವನ್ನು ಖರೀದಿಸಿದ್ದಾರೆ.
ನಿನ್ನೆ ಆ ಪೇಟ ಶ್ರೀಕಂಠಕುಮಾರ್ ಅವರಿಗೆ ತಲುಪಿದೆ. ಈ ಬಗ್ಗೆ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಅವರು ಗುಜರಾತ್ನಲ್ಲಿ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಓದಿ ತಿಳಿದುಕೊಂಡಿದ್ದೆ. ಆಗಿನಿಂದಲೂ ಮೋದಿ ಅಭಿಮಾನಿ ಆಗಿದ್ದೆ. ಅದಾದ ಬಳಿಕ ಹರಾಜು ಪ್ರಕ್ರಿಯೆ ಬಗ್ಗೆ ತಿಳಿದುಕೊಂಡು ಭಾಗವಹಿಸಿದ್ದೆ. ಮೋದಿ ಅಂದ ಕೂಡಲೇ ಅವರು ತೊಡುವ ಪೇಟಾ ಬಹಳ ಆಕರ್ಷಣಿಯವಾಗಿರುತ್ತದೆ. ಇದರಿಂದಾಗಿ ಪೇಟವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ ಎಂದರು. 
ಈ ಪೇಟಕ್ಕೆ ಗಾಜಿನ ಶೋಕೆಸ್ ಮಾಡಿ ಇಡುವ ಯೋಚನೆಯಲ್ಲಿದ್ದೇನೆ. ಜೊತೆಗೆ ಅವರು ಪೇಟಕ್ಕೆ ನೀಡಿದ್ದ ಹಣವು ನಮಾಮಿ ಗಂಗಾ ಯೋಜನೆಗೆ ಬಳಕೆಯಾಗುತ್ತದೆ ಎಂಬ ಸಂತಸವನ್ನು ವ್ಯಕ್ತಪಡಿಸಿದರು