ಬದಲಾವಣೆಯನ್ನ ಸ್ವೀಕರಿಸಿ ಧೈರ್ಯ ಮಾಡಿ ಮತ ಚಲಾಯಿಸಿ. ವಿಡಿಯೋ ಸಂದೇಶದಲ್ಲಿ ಶಶಿ ತರೂರ್​ ಮನವಿ

ಬದಲಾವಣೆಯನ್ನ ಸ್ವೀಕರಿಸಿ ಧೈರ್ಯ ಮಾಡಿ ಮತ ಚಲಾಯಿಸಿ. ವಿಡಿಯೋ ಸಂದೇಶದಲ್ಲಿ ಶಶಿ ತರೂರ್​ ಮನವಿ

ವದೆಹಲಿ: ಕಾಂಗ್ರೆಸ್​ ಅಧ್ಯಕ್ಷೀಯ ಸ್ಥಾನಕ್ಕೆ ಇಂದು(ಸೋಮವಾರ) ದೇಶಾದ್ಯಂತ ಮತದಾನ ನಡೆಯಲಿದ್ದು, ಕರ್ನಾಟಕದ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಇವರಿಬ್ಬರಲ್ಲಿ ಯಾರಿಗೆ ಸಿಗಲಿದೆ ಕಾಂಗ್ರೆಸ್ ಅಧ್ಯಕ್ಷೀಯ ಚುಕ್ಕಾಣಿ?

ಎಂಬ ಕುತೂಹಲ ಗರಗೆದರಿದೆ. ಮತದಾನಕ್ಕೂ ಮುನ್ನ ದಿನ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿರುವ ಅಭ್ಯರ್ಥಿ ಶಶಿ ತರೂರ್​, 'ಬದಲಾವಣೆಯನ್ನ ಸ್ವೀಕರಿಸಿ, ಧೈರ್ಯ ಮಾಡಿ ವೋಟ್ ಮಾಡಿ' ಎಂದು ಕರೆ ನೀಡಿದ್ದಾರೆ.

'ನಮ್ಮಂತಹ ದೊಡ್ಡ ಸಂಘಟನೆಯಲ್ಲಿ ಬದಲಾವಣೆ ಬಗ್ಗೆ ಕಳವಳ ಇರುವುದು ಸಹಜ. ಮತದಾರರಲ್ಲಿ ಹಿಂಜರಿಕೆ ಇದೆ. ಯಾರಿಗೆ ಮತ ಹಾಕಬೇಕು ಎಂದು ಹಲವರು ಇನ್ನೂ ನಿರ್ಧರಿಸಿಲ್ಲ. ಬದಲಾವಣೆಯನ್ನ ಸ್ವೀಕರಿಸಿ ಧೈರ್ಯ ಮಾಡಿ ಮತ ಚಲಾಯಿಸಿ' ಎಂದಿದ್ದಾರೆ.

'ಕಾಂಗ್ರೆಸ್​ ಪಕ್ಷವು ಅಗತ್ಯಕ್ಕೆ ತಕ್ಕಂತೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳನ್ನು ಸ್ವೀಕರಿಸುತ್ತಲೇ ಬಂದಿದೆ' ಎಂದಿರುವ ಶಶಿ ತರೂರ್​, 1991ರ ಆರ್ಥಿಕ ಉದಾರೀಕರಣ, ಇಂದಿರಾ ಗಾಂಧಿ ನಿಧನದ ಬಳಿಕ ರಾಜೀವ್​ ಗಾಂಧಿ ತಂದ ಪೀಳಿಗೆಯ ಬದಲಾವಣೆ, ಹಸಿರು ಕ್ರಾಂತಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.