ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿನ ವಿವಿಧ ಕೋರ್ಸ್‍ಗಳಾದ ಬ್ಯಾಚುಲರ್ ಆಫ್ ಫರ್‍ಪಾರ್ಮಿಂಗ್ ಆಟ್ರ್ಸ್, ಸ್ನಾತಕ ಪದವಿ, ಮಾಸ್ಟರ್ ಆಫ್ ಫರ್‍ಫಾರ್ಮಿಂಗ್ ಆಟ್ರ್ಸ್, ಸ್ನಾತಕೋತ್ತರ ಪದವಿ, ಡಿಪ್ಲೊಮೋ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯುಜಿಸಿ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವವರು (ನೃತ್ಯ, ಸಂಗೀತ ಮತ್ತು ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ನೆಟ್/ಕೆ-ಸೆಟ್ ಉತ್ತೀರ್ಣರಾಗಿರುವವರು ಅಥವಾ ಕೋರ್ಸ್ ವರ್ಕ್‍ನೊಂದಿಗೆ ಪಿಹೆಚ್‍ಡಿ., ಪದವಿ ಪಡೆದಿರುವವರು) ಅರ್ಹರಾಗಿರುತ್ತಾರೆ. ವಿಶ್ವವಿದ್ಯಾನಿಲಯದ ನಿಯಮಾನುಸಾರ ವೇತನ ನೀಡಲಾಗುವುದು. ಅಧಿಸೂಚನೆಯ ದಿನಾಂಕ ದಿಂದ 10 ದಿನಗಳೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಈ ಸಂಬಂಧ ಹೆಚ್ಚಿನ ವಿವರಗಳನ್ನು ನಮ್ಮ ವಿಶ್ವವಿದ್ಯಾಲಯದ ಅಧೀಕೃತ ಜಾಲತಾಣ ದಿಂದ ಪಡೆಯಬಹುದು.
ಅರ್ಜಿ ಫಾರಂ ಹಾಗೂ ಇನ್ನಿತರ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಸಾಮಾನ್ಯ ವರ್ಗ ರೂ.500 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1(ಪ್ರಮಾಣ ಪತ್ರದೊಂದಿಗೆ) ಅಭ್ಯರ್ಥಿಗಳು ರೂ.250 ಗಳನ್ನು ವಿಶ್ವವಿದ್ಯಾಲಯವು ಮೈಸೂರಿನ ಕೃಷ್ಣಮೂರ್ತಿಪುರಂ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣಕಾಸು ಅಧಿಕಾರಿ ಇವರ ಪದನಾಮವನ್ನು ಹೊಂದಿರುವ ಉಳಿತಾಯ ಖಾತೆ ಸಂಖ್ಯೆ: (ಐಎಪ್‍ಎಸ್‍ಸಿ ಕೋಡ್: SಃIಓ0040056) ಕ್ಕೆ ಚಲನ್