ಬಾಲ್ಯ ವಿವಾಹ' ತಡೆಗೆ ಸಾವಿರಾರು ಮಂದಿಯನ್ನು ಬಂಧಿಸಲಾಗುವುದು ; ಅಸ್ಸಾಂ ಸಿಎಂ ಹಿಮಂತ ಶರ್ಮಾ

ಬಾಲ್ಯ ವಿವಾಹ' ತಡೆಗೆ ಸಾವಿರಾರು ಮಂದಿಯನ್ನು ಬಂಧಿಸಲಾಗುವುದು ; ಅಸ್ಸಾಂ ಸಿಎಂ ಹಿಮಂತ ಶರ್ಮಾ

ವದೆಹಲಿ : ಮುಂದಿನ ಒಂದು ವಾರದಲ್ಲಿ ಅಸ್ಸಾಂನಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆಯಾದ ಸಾವಿರಾರು ಪುರುಷರನ್ನು ಬಂಧಿಸಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ನಾಗಾವ್ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ನಾಳೆಯಿಂದ ಬಾಲ್ಯವಿವಾಹದಲ್ಲಿ ತೊಡಗಿರುವ ಸಾವಿರಾರು ಜನರನ್ನು ಬಂಧಿಸಲಾಗುವುದು.

ಮುಂದಿನ ಆರು-ಏಳು ದಿನಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾದ ಸಾವಿರಾರು ಯುವಕರು ಮತ್ತು ಪುರುಷರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಈ ಹಿಂದೆ ಬಾಲ್ಯ ವಿವಾಹ ನಡೆಸಿರುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾದವರನ್ನು ಪೋಕ್ಸೋ ಕಾಯಿದೆಯಡಿಯಲ್ಲಿ ಬಂಧಿಸಲಾಗುವುದು ಎಂದು ವಿವರಿಸಿದ್ದಾರೆ.

ನಾಗಾವ್‌ನಲ್ಲಿ ಶೇಕಡಾ 42ರಷ್ಟು ಬಾಲಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಇದರ ಜೊತೆಗೆ ಶೇ.15 ರಷ್ಟು ಯುವತಿಯರು 18 ವರ್ಷಕ್ಕಿಂತ ಮೊದಲೆ ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದೆ ಎಂಬ ಮಾಹಿತಿ ಇದೆ.

ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಘೋಷಣೆಯು ಬಾಲ್ಯ ವಿವಾಹದ ವಿರುದ್ಧ ಸರ್ಕಾರದ ಅಭಿಯಾನದ ಭಾಗವಾಗಿದೆ. ಇದು ಮಗುವಿನ ಗರ್ಭಧಾರಣೆಯ ಹಿಂದಿನ ಕಾರಣ ಎಂದು ಅವರು ಉಲ್ಲೇಖಿಸಿದ್ದು,ಇದು ಅಸ್ಸಾಂನಲ್ಲಿ ಹೆಚ್ಚಿನ ತಾಯಿ ಮತ್ತು ಶಿಶು ಮರಣ ದರಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.