ಕೃಷಿ ಕಾಯಿದೆಗಳು ರೈತರಿಗೆ ಮಾರಕ
ಗಜೇಂದ್ರಗಡ
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಇಂದು ಗಜೇಂದ್ರಗಡದಲ್ಲಿ ರೈತ ಮುಖಂಡ ಕೊಡಲಿಪ್ಪ ಕೊಡಿಮನಿ ನೇತೃತ್ವದಲ್ಲಿ ಕೆ ಕೆ ವೃತ್ತದಿಂದ ದುರ್ಗಾ ವೃತ್ತ, ಬಸ್ ನಿಲ್ದಾಣದಿಂದ ಮರಳಿ ಕೆ ಕೆ ಸರ್ಕಲ್ ವರೆಗೆ ಜಾಥಾ ನಡೆಯಿತು, ನಂತರ ಕೆ ಕೆ ವೃತ್ತದಲ್ಲಿ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತಾನಡಿದ ಕೊಡಲಿಪ್ಪ ಕೊಡಿಮನಿ, ದೇಶದ 140 ಕೋಟಿ ಜನರಿಗೆ ಅನ್ನ ಹಾಕುವ ರೈತನ ವಿರುದ್ಧ ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯಿದೆಗಳು ರೈತರಿಗೆ ಮಾರಕವಾಗಿವೆ ಎಂದು ಅಸಮಾಧಾನ ಹೊರಹಾಕಿದರು. ಇನ್ನು ಇದೆ ವೇಳೆ ಪ್ರತಿಭಟನಾಕಾರರು ಹಾಗೂ ಪೆÇಲೀಸರ ನಡುವೆ ಮಾತಿನ ವಾಗ್ವಾದ ನಡೆಯಿತು, ಮತ್ತೊಂದೆಡೆ ನಗರದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರ ಸುಗಮಗೊಳಿಸಲು ಪೆÇಲೀಸರು ಹರಸಾಹಸಪಟ್ಟರು. ಇನ್ನು ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಯಿತು.