ಗದಗ ಜಿಲ್ಲೆಯಲ್ಲಿ ಮಾಸ್ಕ್ ನಿಯಂತ್ರಣಕ್ಕಿಲ್ಲ ಬೆಲೆ : ಮಾರ್ಕೇಟ್‌ನಲ್ಲಿ ಗ್ರಾಹಕರು, ವ್ಯಾಪಾರಸ್ಥರ ನಿರ್ಲಕ್ಷ್ಯ

ಗದಗ : ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್ ಅಲರ್ಟ್ ಆಗಿದೆ.
ಈಗಾಗಲೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೊರೊನಾ ನಿಯಮ ಜಾರಿಗೆ ತಂದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಕೆಲ ಸರಳ ರೂಲ್ಸ್ಗಳನ್ನ ಸರ್ಕಾರ ಹೊರಡಿಸಿದೆ. ಶಾಲೆ, ಕಾಲೇಜುಗಳಲ್ಲಿ, ಥಿಯೇಟರ್, ಮಾಲ್, ಮಾರ್ಕೆಟ್ನಲ್ಲಿ ಮಾಸ್ಕ ಕಡ್ಡಾಯ ಮಾಡಲಾಗಿದೆ. ಆದ್ರೆ ರಾಜ್ಯದಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ.
ಗದಗ ಜಿಲ್ಲೆಯಲ್ಲೂ ಮಾಸ್ಕ್ ನಿಯಂತ್ರಣಕ್ಕಿಲ್ಲ ಬೆಲೆ ಇಲ್ಲದಂತಾಗಿದ್ದು, ಮಾರ್ಕೆಟ್ನಲ್ಲಿ ಮಾಸ್ಕ್ ಇಲ್ಲದೇ ಜನರು ಎಗ್ಗಿಲ್ಲದೆ ಓಡಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದಾರೆ. ಬಹುತೇಕ ಮಂದಿ ಮಾಸ್ಕ್ ಇಲ್ಲದೆ ಓಡಾಟ ನಡೆಸುತ್ತಿದ್ದಾರೆ. ಮಾರ್ಕೇಟ್‌ನಲ್ಲಿ ಗ್ರಾಹಕರು, ವ್ಯಾಪಾರಸ್ಥರ ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ