ಕುಶಲಕರ್ಮಿಗಳಿಗೆ 50,000 ರೂ. ಬಂಡವಾಳ; 15,000 ಸಹಾಯಧನ

ರಾಜ್ಯದಲ್ಲಿರುವ ಸಣ್ಣ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ಕಲ್ಪಿಸುವ ಮೂಲಕ ಸರ್ಕಾರ ಸಂಕ್ರಾಂತಿ ಉಡುಗೊರೆ ನೀಡಿದೆ. ವಿಶೇಷ ಯೋಜನೆಯಡಿ ಬ್ಯಾಂಕ್‍ಗಳಿಂದ 50,000 ರೂ. ಬಂಡವಾಳ ಒದಗಿಸಲಾಗುತ್ತದೆ. ಇದರಲ್ಲಿ 35,000 ಸಾಲ, 15,000 ರೂ. ಸಹಾಯಧನ. ಫೆಬ್ರವರಿ 1ರಿಂದ ಈ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಕುಶಲಕರ್ಮಿಗೆ 18 ವರ್ಷ ತುಂಬಿರಬೇಕು. ಒಂದು ಅವಧಿಕೆ ಮಾತ್ರ ನೆರವು. ಪಿಡಿಒಗಳಿಂದ ಕುಶಲಕರ್ಮಿ ಪ್ರಮಾಣಪತ್ರ ಕಡ್ಡಾಯವಾಗಿದೆ. ಬ್ಯಾಂಕ್ ಸಾಲಕ್ಕೆ ಮಾತ್ರ ಸಹಾಯಧನ.