3ನೇ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಜಯಸುಧಾ

3ನೇ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಜಯಸುಧಾ

ಹಿರಿಯ ನಟಿ, 64ರ ಹರೆಯದ ಜಯಸುಧಾ ಅವರು 3ನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. "ನಾನು ಮದುವೆಯಾಗಿಲ್ಲ. ನನ್ನೊಂದಿಗೆ ನೀವು ನೋಡಿದ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ನನ್ನ ಜೀವನ ಚರಿತ್ರೆಯನ್ನು ಶೂಟ್ ಮಾಡಲು ಅಮೆರಿಕಾದಿಂದ ಭಾರತಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ನನ್ನ ಮಹತ್ವದ ಬಗ್ಗೆ ತಿಳಿದುಕೊಳ್ಳಲು ನಾನು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ನೀವಂದುಕೊಂಡಂತೆ ಏನು ಇಲ್ಲ ಎಂದು ವದಂತಿಗೆ ತೆರೆ ಎಳೆದಿದ್ದಾರೆ.