ರಮೇಶ್‌ ಜಾರಕಿಹೊಳಿ ಟೀಕೆ ವಿಚಾರ: ಆ ಮೆಂಟಲ್‌ ಕೇಸ್‌ ಬಗ್ಗೆ ನನ್ನ ಕೇಳಬೇಡಿ: ಡಿಕೆಶಿ ವಾಗ್ದಾಳಿ

ರಮೇಶ್‌ ಜಾರಕಿಹೊಳಿ ಟೀಕೆ ವಿಚಾರ: ಆ ಮೆಂಟಲ್‌ ಕೇಸ್‌ ಬಗ್ಗೆ ನನ್ನ ಕೇಳಬೇಡಿ: ಡಿಕೆಶಿ ವಾಗ್ದಾಳಿ

ಬೆಳಗಾವಿ: ಡಿ.ಕೆ ಶಿವಕುಮಾರ್‌ ಬೆಳಗಾವಿ ಆಗಮಿಸಿದ್ದಕ್ಕೆ ರಮೇಶ್‌ ಜಾರಕಿಹೊಳಿ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಮೆಂಟಲ್‌ ಕೇಸ್‌ ಬಗ್ಗೆ ನನ್ನ ಕೇಳಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಗರದದಲ್ಲಿ ಮಾತನಾಡಿದ ಅವರು, ಕೇವಲ ಬೆಳಗಾವಿ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದೇನೆ.

ಇಡೀ ರಾಜ್ಯದಲ್ಲಿ ನಾವು ಪರಿಶುದ್ಧವಾದ ರಾಜಕಾರಣಮಾಡಬೇಕು. ಯಾವುದೇ ಮೆಂಟಲ್‌ ಕೇಸ್‌ ಗಳಿಗೆ ಉತ್ತರ ಕೊಡಲು ಆಗುವುದಿಲ್ಲ.ಹತಾಶೆಯಿಂದ ಇರುವವರಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ ಎಂದರು.

ಇತ್ತ, ಮಾರ್ಚ್‌ 9ರಂದು ಬಿಜೆಪಿ ಭ್ರಷ್ಟಾಚಾರದ ವಿರುದ್ಧ ‌ರಾಜ್ಯ ಬಂದ್‌ ಗೆ ಕಾಂಗ್ರೆಸ್‌ ನವರು ಕರೆ ಕೊಟ್ಟಿದ್ದಾರೆ. ಈ ಬಂದ್‌ ಗೆ ಎಲ್ಲ ಉದ್ಯಮಿಗಳು, ವ್ಯಾಪಾರಿಗಳು ಬೆಂಬಲ ಸೂಚಿಸಲಿದ್ದಾರೆ.
ಮೂರು ವರ್ಷದಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ ಇದರಿಂದ ಇಡೀ ರಾಜ್ಯಕ್ಕೆ ಅಗೌರವ ತಂದಿದೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.