ಪಾಕ್​ನಲ್ಲಿನ ಅಫಘಾನಿಸ್ತಾನದ​ ರಾಯಭಾರಿ ಅಧಿಕಾರಿಯ ಮಗಳನ್ನು ಅಪಹರಿಸಿ ಹಿಂಸೆ

ಪಾಕ್​ನಲ್ಲಿನ ಅಫಘಾನಿಸ್ತಾನದ​ ರಾಯಭಾರಿ ಅಧಿಕಾರಿಯ ಮಗಳನ್ನು ಅಪಹರಿಸಿ ಹಿಂಸೆ

ಅಪರಿಚಿತರಿಂದ ಅಪಹರಣಕ್ಕೆ ಒಳಗಾಗಿದ್ದ ಪಾಕಿಸ್ತಾನದ ಅಫಘಾನ್​ ರಾಯಭಾರಿ ನಜೀಬು ಅಲಿಖಿಲ್​ ಅವರ ಮಗಳನ್ನು ಕಡೆಗೂ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡುವ ಮುನ್ನ ಆಕೆಗೆ ಹಿಂಸೆ ನೀಡಲಾಗಿದೆ ಎಂದು ವರದಿಯಾಗಿದೆ. ಸಿಲ್ಸಿಲಾ ಅಲಿಖಿಲ್​ ಅವರು ಇಸ್ಲಾಮಾಬಾದ್​ನಲ್ಲಿ ತಮ್ಮ ಮನೆಗೆ ಹಿಂದಿರುಗುವ ವೇಳೆ ಅರಿಚಿತರು​ ಅಪಹರಣ ನಡೆಸಿದ್ದರು. ಈ ಕೃತ್ಯವನ್ನು ಅಫಘಾನಿಸ್ತಾನ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ತಮ್ಮ ರಾಯಭಾರಿಗಳು ಮತ್ತು ಅವರ ಕುಟುಂಬಗಳನ್ನು ರಕ್ಷಿಸಲು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅಫಘಾನಿಸ್ತಾನ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಅಲ್ಲದೇ, ಅಫಘಾನಿಸ್ತಾನದಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕ ಕಾರ್ಯಚಾರಣೆಯನ್ನು ರಕ್ಷಿಸಲು ಪಾಕಿಸ್ತಾನ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ. ಸಿಲ್ಸಿಲಾ ಅಲಿಖಿಲ್​ ಅವರನ್ನು ಜು. 16ರಂದು ಇಸ್ಲಾಮಾಬಾದ್​ನಲ್ಲಿ ಅಪರಿಚಿತರು ಅಪಹರಿಸಿದ್ದರು. ಇಸ್ಲಾಮಾಬಾದ್​ನಲ್ಲಿ ಹಲವು ಗಂಟೆಗಳ ಕಾಲ ಆಕೆಯನ್ನು ಹಿಂಸಿಸಿದ್ದಾರೆ

ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಫಘಾನಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಪ್ರಕರಣದ ಬೆನ್ನಲ್ಲೇ ಅಫಘಾನ್​ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ. ಜೊತೆಗೆ ಪಾಕಿಸ್ತಾನದಲ್ಲಿರುವ ರಾಯಭಾರಿ ಕಚೇರಿಯ ಭದ್ರತೆ ಬಗ್ಗೆ ಕೂಡ ಅಫಘಾನಿಸ್ತಾನ ಖಚಿತ ಪಡಿಸಿಕೊಂಡಿದೆ.ಈ ಘಟನೆಯಿಂದ ಅಫಘಾನಿಸ್ತಾನದಲ್ಲಿ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ.