ಸಿಎಂ ಕುರ್ಚಿ ಭದ್ರಪಡಿಸಲು ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆಯೇ? ಕಾಂಗ್ರೆಸ್ ಟೀಕೆ

ಸಿಎಂ ಕುರ್ಚಿ ಭದ್ರಪಡಿಸಲು ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆಯೇ? ಕಾಂಗ್ರೆಸ್ ಟೀಕೆ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ದೆಹಲಿ ಭೇಟಿ ಸ್ವಪಕ್ಷೀಯರು ಸೇರಿದಂತೆ ರಾಜಕೀಯ ಮುಖಂಡರಲ್ಲಿ ನಾನಾ ಅನುಮಾನಗಳಿಗೆ ಕಾರಣವಾಗಿದೆ. ಈ ಮಧ್ಯೆ ಸಿಎಂ ಕುರ್ಚಿ ಭದ್ರಪಡಿಸಲು ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆಯೇ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಲಾಗಿದ್ದು, ಯಡಿಯೂರಪ್ಪ ಅವರ ದೆಹಲಿ ಭೇಟಿಯನ್ನು ಪ್ರಶ್ನಿಸಲಾಗಿದೆ. ಲಸಿಕೆ ಕೊರತೆ ನೀಗಿಸಲು ದೆಹಲಿಗೆ ತೆರಳಿದ್ದಾರೆಯೇ? ರಾಜ್ಯಕ್ಕೆ ಬರಬೇಕಿದ್ದ ಜಿಎಸ್ ಟಿ ಕೇಳಲು ಹೋಗಿದ್ದಾರಾ? ಎಂದು ಪ್ರಶ್ನಿಸಲಾಗಿದೆ.

ನೆರೆ ಪರಿಹಾರದ ಬಾಕಿ ಕೇಳಲು ಅಥವಾ ಕೋವಿಡ್ ಮೂರನೇ ಅಲೆ ಎದುರಿಸಲು ನೆರವಿನ ಪ್ಯಾಕೇಜ್ ತರಲು ದೆಹಲಿಗೆ ಮುಖ್ಯಮಂತ್ರಿ ಹೋಗಿದ್ದಾರೆಯೇ? ಅಥವಾ ಸಿಎಂ ಕುರ್ಚಿ ಭದ್ರಪಡಿಸಲು ಹೋಗಿದ್ದಾರೆಯೇ ಎಂದು ರಾಜ್ಯ ಬಿಜೆಪಿಯನ್ನು ಕೇಳಿದೆ.