ತಂದೆ- ತಾಯಿಯನ್ನು ನೋಡಿಕೊಳ್ಳದೇ ಬೀದಿಗೆ ತಳ್ಳಿದ ಹೆತ್ತ ಮಕ್ಕಳು!
ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ತಂಬ್ರಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ.
ವೃದ್ಧ ದಂಪತಿಗೆ ನಾಲ್ಕು ಜನ ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳಿವೆ. ದಂಪತಿ ಕೆಲ ದಿನಗಳ ಹಿಂದು ಎಂಟು ಮಕ್ಕಳಿಗೆ ತಮ್ಮ ಆಸ್ತಿಯನ್ನು ವಿಭಾಗಿಸಿ ಬರೆದುಕೊಟ್ಟಿದ್ದರು. ಇಂದು ಗಂಡು ಮಕ್ಕಳ ಕಣ್ಣು ಕೆಂಪಾಗಿಸಿತ್ತು.
ಹೆಣ್ಣು ಮಕ್ಕಳಿಗೆ ಆಸ್ತಿ ಬರೆದಿದ್ದಕ್ಕೆ ತಂದೆ-ತಾಯಿಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಇನ್ನು ಈ ವಿಷಯ ತಿಳಿಯುತ್ತಲೇ ಹೆಣ್ಣು ಮಕ್ಕಳು ತಂದೆ-ತಾಯಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ತಂದೆ ತಾಯಿಯನ್ನು ನೀವ್ಯಾಕೆ ನೋಡಿಕೊಳ್ಳುತ್ತಿದ್ದೀರಿ ಎಂದು ದೌರ್ಜನ್ಯ ಮಾಡಿದ್ದಾರೆ ಅಂತ ಹೆಣ್ಣು ಮಕ್ಕಳು ಆರೋಪಿಸಿದ್ದಾರೆ.
ಇತ್ತೀಚೆಗೆ ಹೊಲಕ್ಕೆ ಹೋದ ಮೊಮ್ಮಗನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಹೆಣ್ಣು ಮಕ್ಕಳಿಗೆ ಆಸ್ತಿ ಬರೆದಿದ್ದು ತಪ್ಪು ಎಂದು ಗಂಡು ಮಕ್ಕಳು ವಾದಿಸುತ್ತಿದ್ದಾರೆ.
ಈ ಎಲ್ಲ ಘಟನೆಗಳಿಂದ ನೊಂದ ವೃದ್ಧ ದಂಪತಿ ತಮಗೆ ನ್ಯಾಯ ಕೊಡಿಸುವಂತೆ ವಿಜಯನಗರದ SP ಕಚೇರಿ ಮುಂದೆ ಕುಳಿತಿದ್ದಾರೆ.