ವಾಯುಮಾಲಿನ್ಯ ಹೆಚ್ಚಳದಿಂದ 40% ಭಾರತೀಯರ ಜೀವಿತಾವಧಿಯಲ್ಲಿ 9 ವರ್ಷ ನಷ್ಟ: ಅಮೆರಿಕ ಸಂಶೋಧನಾ ವರದಿ
ವಾಯುಮಾಲಿನ್ಯ ಹೆಚ್ಚಳದಿಂದ 40% ಭಾರತೀಯರ ಜೀವಿತಾವಧಿಯಲ್ಲಿ 9 ವರ್ಷ ನಷ್ಟ: ಅಮೆರಿಕ ಸಂಶೋಧನಾ ವರದಿ
ವಾಷಿಂಗ್ಟನ್: ವಾಯು ಮಾಲಿನ್ಯ ಸಮಸ್ಯೆಯು ಸುಮಾರು 40% ಭಾರತೀಯರ ಸಾಮಾನ್ಯ ಜೀವಿತಾವಧಿಯನ್ನು 9 ವರ್ಷದಷ್ಟು ಕಡಿಮೆ ಮಾಡಲಿದೆ ಎಂದು ಅಮೆರಿಕ ಮೂಲದ ಸಂಶೋಧಕರ ತಂಡವೊಂದರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ರಾಜಧಾನಿ ದೆಹಲಿ ಸೇರಿದಂತೆ ಕೇಂದ್ರ, ಪೂರ್ವ ಮತ್ತು ಉತ್ತರ ಭಾರತದಲ್ಲಿನ ಅತ್ಯಧಿಕ ಮಾಲಿನ್ಯ ಮಟ್ಟದ ಪ್ರದೇಶಗಳಲ್ಲಿ 48 ಕೋಟಿಗೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ. ಪಶ್ಚಿಮದ ರಾಜ್ಯ ಮಹಾರಾಷ್ಟ್ರ ಮತ್ತು ಕೇಂದ್ರಭಾಗದಲ್ಲಿರುವ ರಾಜ್ಯ ಮಧ್ಯಪ್ರದೇಶದಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕುಸಿದಿದೆ. ಭಾರತದ ಅತ್ಯಧಿಕ ವಾಯುಮಾಲಿನ್ಯ ಭೌಗೋಳಿಕವಾಗಿ ವಿಸ್ತರಣೆಯಾಗುತ್ತಿದೆ ಎಂದು ಚಿಕಾಗೊ ವಿವಿಯ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಸಿದ್ಧಪಡಿಸಿದ ಸಂಶೋಧನಾ ವರದಿ ಹೇಳಿದೆ.
ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುವುದನ್ನು ತಡೆಯಲು ಭಾರತದಲ್ಲಿ 2019ರಲ್ಲಿ ಚಾಲನೆ ನೀಡಲಾಗಿರುವ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ(ಎನ್ಸಿಎಪಿ) ಶ್ಲಾಘನೀಯವಾಗಿದ್ದು , ಈ ಯೋಜನೆ ಗುರಿ ತಲುಪಿದರೆ ದೇಶದ ಜನರ ಒಟ್ಟು ಜೀವಿತಾವಧಿಯಲ್ಲಿ 1.7 ವರ್ಷದ ಹೆಚ್ಚಳ ಮತ್ತು ದೆಹಲಿ ಜನತೆಯ ಜೀವಿತಾವಧಿಯಲ್ಲಿ 3.1 ವರ್ಷದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನಾ ವರದಿ ಹೇಳಿದೆ.
ವಿಶ್ವದಲ್ಲಿ ಅತ್ಯಧಿಕ ವಾಯುಮಾಲಿನ್ಯ ಇರುವ ರಾಜಧಾನಿಗಳ ಪಟ್ಟಿಯಲ್ಲಿ ನವದೆಹಲಿ ಸತತ 3ನೇ ವರ್ಷ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ದೇಶದಲ್ಲಿ ಅತ್ಯಧಿಕ ವಾಯುಮಾಲಿನ್ಯ ಇರುವ 102 ನಗರಗಳಲ್ಲಿ 2024ರೊಳಗೆ ವಾಯುಮಾಲಿನ್ಯ ಮಟ್ಟವನ್ನು 20ರಿಂದ 30%ದಷ್ಟು ಕಡಿಮೆಗೊಳಿಸುವ ಉದ್ದೇಶ ಎನ್ ಸಿಎಪಿ ಯೋಜನೆಯಲ್ಲಿದೆ.
ವಿವಿಧ ರೀತಿಯ ದೀರ್ಘಾವಧಿ ವಾಯುಮಾಲಿನ್ಯದ ಪ್ರದೇಶದಲ್ಲಿರುವ ಜನರ ಆರೋಗ್ಯವನ್ನು ತುಲನೆ ಮಾಡಿ, ಈ ಸಮೀಕ್ಷೆಯ ಫಲಿತಾಂಶವನ್ನು ಭಾರತ ಹಾಗೂ ಇತರ ದೇಶಗಳ ವಿವಿಧ ಪ್ರದೇಶಗಳಿಗೆ ಅನ್ವಯಿಸಿ ಅಧ್ಯಯನ ನಡೆಸಿ ವರದಿ ನೀಡಲಾಗಿದೆ.
2020ರಲ್ಲಿ ಕೋವಿಡ್ ನಿರ್ಬಂಧಗಳಿಂದಾಗಿ ದೆಹಲಿಯ ನಿವಾಸಿಗಳು ಸ್ವಚ್ಛವಾದ ಗಾಳಿಯಲ್ಲಿ ಉಸಿರಾಡಿದರು, ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರೀಯ ರಾಜಧಾನಿಯ ನಿವಾಸಿಗಳು ಕೆಲವು ಶುದ್ಧ ಗಾಳಿಯನ್ನು ಉಸಿರಾಡಿದರು. ಆದಾಗ್ಯೂ, ಚಳಿಗಾಲದಲ್ಲಿ, ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಕೃಷಿ ಪ್ರದೇಶಗಳಲ್ಲಿನ ಅವಶೇಷಗಳನ್ನು ಸುಟ್ಟ ನಂತರ ಗಾಳಿಯಲ್ಲಿ ವಿಷತ್ವವು ತೀವ್ರವಾಗಿ ಏರಿತು. ಬಾಂಗ್ಲಾದೇಶವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಕೆಲಸ ಮಾಡಿದರೆ, ಅದು 5.4 ವರ್ಷಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ಇಪಿಐಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೀರ್ಘಕಾಲೀನ ವಾಯು ಮಾಲಿನ್ಯದ ವಿವಿಧ ಹಂತಗಳಿಗೆ ಒಡ್ಡಿಕೊಂಡ ಜನರ ಆರೋಗ್ಯವನ್ನು EPIC ಹೋಲಿಸುತ್ತದೆ. ಅದರ ನಂತರ, ಇದು ಜೀವಿತಾವಧಿ ಸಂಖ್ಯೆಯನ್ನು ತಲುಪಲು ಭಾರತದ ವಿವಿಧ ಸ್ಥಳಗಳಿಗೆ ಮತ್ತು ಇತರೆಡೆಗಳಿಗೆ ಫಲಿತಾಂಶಗಳನ್ನು ಅನ್ವಯಿಸು