ಬೆಂಗಳೂರಿನಲ್ಲಿ ಭಯಾನಕ ಘಟನೆ: ಗರ್ಲ್​ಫ್ರೆಂಡ್​ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ

ಬೆಂಗಳೂರಿನಲ್ಲಿ ಭಯಾನಕ ಘಟನೆ: ಗರ್ಲ್​ಫ್ರೆಂಡ್​ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೀಗ ನಗರದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ.

ಮದುವೆಯಾಗಿ ಮಗು ಇರುವ ಮಹಿಳೆಯ ಜೊತೆ ಸಂಬಂಧ ಹೊಂದಿದ್ದ ಯುವಕನೊಬ್ಬ ತನ್ನ ಗರ್ಲ್​ಫ್ರೆಂಡ್​​ನ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ,ಕೊಲೆ ಮಾಡಿದ್ದಾನೆ.ಆಕೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು.

ಆಕೆ ಆರೋಪಿಯೊಂದಿಗೆ 1 ವರ್ಷದಿಂದ ಸಂಬಂಧ ಹೊಂದಿದ್ದಳು. ಈ ವೇಳೆ ಆಗಾಗ ಆಕೆಯನ್ನು ಭೇಟಿಯಾಗಲು ಮನೆಗೆ ಬರುತ್ತಿದ್ದ .ಆಕೆಯ 3 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು, ಈ ವಿಚಾರವನ್ನು ಆಕೆ ಬೇರೆಯವರಿಗೆ ಹೇಳಿದರೆ ಕಷ್ಟವೆಂದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.