ನೀವು 'ಮತದಾರರ ಗುರುತಿನ ಚೀಟಿ' ಕಳೆದುಕೊಂಡಿದ್ದೀರ.? 'ಹೊಸ ಗುರುತಿನ ಚೀಟಿ'ಗೆ ಅರ್ಜಿ ಆಹ್ವಾನ, ಕೂಡಲೇ ಸಲ್ಲಿಸಿ

ನೀವು 'ಮತದಾರರ ಗುರುತಿನ ಚೀಟಿ' ಕಳೆದುಕೊಂಡಿದ್ದೀರ.? 'ಹೊಸ ಗುರುತಿನ ಚೀಟಿ'ಗೆ ಅರ್ಜಿ ಆಹ್ವಾನ, ಕೂಡಲೇ ಸಲ್ಲಿಸಿ

ಬೆಂಗಳೂರು: ವಿವಿಧ ಕಾರಣಗಳಿಂದ ಮತದಾರರ ಗುರುತಿನ ಚೀಟಿಯನ್ನು ( Voter ID ) ನೀವು ಕಳೆದುಕೊಂಡಿದ್ದರೇ, ಇಲ್ಲವೇ ನಿಮ್ಮ ಹಳೆಯ ಮತದಾರರ ಗುರುತಿನ ಚೀಟಿ ಬಳಕೆಗೆ ಯೋಗ್ಯವಿಲ್ಲ ಅನಿಸಿದರೇ, ಹೊಸ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಭಾರತ ಚುನಾವಣಾ ಆಯೋಗದ ( Election Commission of India ) ನಿರ್ದೇಶನಗಳನ್ನು ಪಾಲಿಸಿ, ದಿನಾಂಕ: 01.01.2023ಕ್ಕೆ ಅಂತಿಮಗೊಳಿಸಿ ಮತದಾರರ ಪಟ್ಟಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದಿದೆ.

ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 23/ID/2022-ERS ದಿನಾಂಕ: 22.06.2022 ರಲ್ಲಿನ ಅವಕಾಶಗಳಂತೆ ಈಗಾಗಲೇ ಮತದಾರರು ನೊಂದಣಿಯಾಗಿದ್ದು, ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದಲ್ಲಿ ಅಥವಾ ಹರಿದು ಹೋಗಿ ಬಳಸಲು ಯೋಗ್ಯವಿಲ್ಲದಿದ್ದಲ್ಲಿ ನಮೂನೆ-8ನ್ನು(EPIC Replacement / ಗುರುತಿನ ಚೀಟಿಯ ಬದಲಾವಣೆ)ಗಾಗಿ ಅರ್ಜಿ ಸಲ್ಲಿಸಿ ಎಂದು ಹೇಳಿದೆ.

ಇದಲ್ಲದೇ NVSP ಅಥವಾ Voter Helpline App ಮುಖೇನಾ ಹೊಸ ಗುರುತಿನ ಚೀಟಿಗೆ ಸಲ್ಲಿಸಿದಲ್ಲಿ, ತಮ್ಮ ಮನೆ ಬಾಗಿಲಿಗೆ ಶುಲ್ಕರಹಿತವಾಗಿ ಅರ್ಜಿ ಸಲ್ಲಿಸಿದ ನಂತರ ಮುಂದಿನ 30(ಮೂವತ್ತು) ದಿನಗಳಲ್ಲಿ ಭಾರತೀಯ ಅಂಚೆ ಇಲಾಖೆ ಮುಖೇನಾ ಹೊಸ ಗುರುತಿನ ಚೀಟಿಯು ತಲುಪಲಿದೆ ಎಂದು ತಿಳಿಸಿದೆ.

ಒಂದುವೇಳೆ ಮತದಾರರ ಗುರುತಿನ ಚೀಟಿ ತಲುಪದೇ ಇದ್ದಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಮತದಾರರ ನೊಂದಣಾಧಿಕಾರಿ / ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಪ್ರಸ್ತುತ ಸ್ಥಿತಿಯ ಮಾಹಿತಿಯನ್ನು ಪಡೆಬಹುದಾಗಿದೆ ಎಂದು ಹೇಳಿದೆ.