ಬೇರೆ ಪಕ್ಷದಿಂದ ಬಂದವರಿಗೆ ಜೆಡಿಎಸ್ ಟಿಕೆಟ್ ಫಿಕ್ಸ್: ಬಹಿರಂಗವಾಗೇ ಆಹ್ವಾನ ನೀಡಿದ HDK

ಬೇರೆ ಪಕ್ಷದಿಂದ ಬಂದವರಿಗೆ ಜೆಡಿಎಸ್ ಟಿಕೆಟ್ ಫಿಕ್ಸ್: ಬಹಿರಂಗವಾಗೇ ಆಹ್ವಾನ ನೀಡಿದ HDK

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ಚುರುಕಾಗಿದೆ. ಇದೇ ವೇಳೆಯಲ್ಲಿ ಬೇರೆ ಪಕ್ಷದಿಂದ ಬಂದಂತವರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದು ಮಂಗಳವಾರ ಆಗಿರುವ ಕಾರಣ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸುವುದಿಲ್ಲ. ನಾಳೆ ಅಥವಾ ಗುರುವಾರದಂದು ಪ್ರಕಟಿಸುವುದಾಗಿ ಹೇಳಿದೆ.

ಯಾವ ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಫೈನಲ್ ಮಾಡಲಾಗಿದೆ. ಆದ್ರೇ ಅಭ್ಯರ್ಥಿಗಳ ಕೊರತೆ ಇರುವ ಕ್ಷೇತ್ರಗಳಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದಾಗಿ ಹೇಳುವ ಮೂಲಕ, ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದಾರೆ.

Fact Check: ಬಿಜೆಪಿಯಿಂದ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.?: ಇದು 'ವೈರಲ್ ಲೀಸ್ಟ್' ಹಿಂದಿನ ಅಸಲಿ ಸತ್ಯ.!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಇಂದು ವಾಸ್ತವಾಂಶ ಆಧರಿಸಿ ಅಭ್ಯರ್ಥಿ ಆಯ್ಕೆಯಾಗಿದೆ. ಇಂದು ರಾಜ್ಯ ಸಮಿತಿಯ ಸಭೆ ಕರೆದಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಸಭೆ ಬಳಿಕ ಕೇಂದ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುವುದು. 8ನೇ ತಾರೀಖು ಕೇಂದ್ರದಲ್ಲಿ ಚರ್ಚೆಯಾಗಿ ಪಟ್ಟಿ ಬಿಡುಗಡೆಯಾಗಲಿದೆ ಎಂಬುದಾಗಿ ಹೇಳಿದ್ದರು. ಈ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ( Social Media ) ಬಿಜೆಪಿಯ 100 ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿತ್ತು. ಅದರ ಅಸಲಿ ಸತ್ಯವೇನು ಎನ್ನುವ ಬಗ್ಗೆ ಮುಂದೆ ಓದಿ.

ವಾಟ್ಸ್ ಆಪ್ ನಲ್ಲಿ ಕರ್ನಾಟಕ ವಿಧಾನಸಬಾ ಚುನಾವಣೆಗಾಗಿ ( Karnataka Assembly Election 2023 ) 100 ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ( BJP Candidate List ) ಬಿಡುಗಡೆಯಾಗಿದೆ. ಇದನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿದಂತೆ ಸಹಿ ಕೂಡ ಮಾಡಲಾಗಿದ್ದಂತ ಪಟ್ಟಿ ವೈರಲ್ ಆಗಿತ್ತು. ಇದನ್ನು ಅನೇಕರು ನಿಜವಾದ ಲೀಸ್ಟ್ ಎಂಬುದಾಗಿಯೇ ನಂಬಿದ್ದರು.

ವೈರಲ್ ಆಗಿದ್ದಂತ ಬಿಜೆಪಿಯ 100 ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ, ಮಂಡ್ಯದಿಂದ ಸುಮಲತಾ ಅಂಬರೀಶ್, ಸೊರಬ ಕ್ಷೇತ್ರದಿಂದ ಪಿ.ರಾಜೀವ್ ಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ತೋರಿಸಲಾಗಿತ್ತು. ಇದು ಅಸಲಿಯೋ, ನಕಲಿಯೋ ಎನ್ನುವ ಬಗ್ಗೆ ಅನೇಕರನ್ನು ಗೊಂದಲಕ್ಕೆ ದೂಡಿತ್ತು. ಆದ್ರೇ ಇದಕ್ಕೆ ತೆರೆ ಎಳೆಯುವಂತೆ ಅರುಣ್ ಸಿಂಗ್ ಅವರೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಏನು ಹೇಳಿದ್ದಾರೆ ಎನ್ನುವ ಬಗ್ಗೆ ಮುಂದಿದೆ ಓದಿ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಚಾರದಲ್ಲಿ ಸುಳ್ಳು ಸುದ್ದಿ- ಅರುಣ್ ಸಿಂಗ್ ಸ್ಪಷ್ಟನೆ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಪ್‍ಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತ 100 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಫೇಕ್ ( Fake ). ಅದು ನಕಲಿಯಾಗಿದ್ದು. ನಿಜವಾದ ಲೀಸ್ಟ್ ಅಧಿಕೃತವಾಗಿ ಬಿಜೆಪಿಯಿಂದ ಏಪ್ರಿಲ್ 8ರಂದು ಇಲ್ಲವೇ ಆನಂತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕಾದು ನೋಡಿ.