ರಾಜಧಾನಿ ಟೋಕಿಯೋ ಬಿಟ್ಟು ಹೋಗೋಕೆ ಪ್ರಜೆಗಳಿಗೆ ಹಣ ಕೊಡ್ತಿದೆ ಜಪಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯೋಗ, ಉತ್ತಮ ಬದುಕನ್ನರಿಸಿ ಗ್ರಾಮೀಣ ಪ್ರದೇಶಗಳಿಂದ ಅಥವಾ ಚಿಕ್ಕ ಚಿಕ್ಕ ಪಟ್ಟಣಗಳಿಂದ ಜನರು ದೊಡ್ಡ ಶಹರಗಳ ಕಡೆ ವಲಸೆ ಹೋಗೋದು ಇಂದಿ ಪ್ರಪಂಚದಲ್ಲಿ ಸರ್ವೇಸಾಮಾನ್ಯ. ಭಾರತವೊಂದೇ ಅಲ್ಲ ಜಗತ್ತಿನಾದ್ಯಂತ ಇದು ರೂಢಿಯಲ್ಲಿದೆ.
ಈ ವರ್ಷದ ಏಪ್ರಿಲ್ ನಿಂದ ಈ ಯೋಜನೆಯನ್ನು ಜಾರಿಗೊಳಿಸಲು ಜಪಾನ್ ಸರ್ಕಾರ ನಿರ್ಧರಿಸಿದ್ದು ಒಂದು ಮಗುವಿಗೆ 1ಮಿಲಿಯನ್ ಯೆನ್ ಗಳಷ್ಟು ಹಣ ನೀಡುವುದಾಗಿ ಕುಟುಂಬಗಳಿಗೆ ಆಫರ್ ಮಾಡುತ್ತಿದೆ. ಟೋಕಿಯೋದಲ್ಲಿನ ಜನಸಂಖ್ಯಾ ಒತ್ತಡವನ್ನು ಕಡಿಮೆ ಮಾಡಲು ಸ್ಥಳೀಯ ಸರ್ಕಾರ ಹಾಗು ಜಪಾನಿನ ಕೇಂದ್ರ ಸರ್ಕಾರಗಳೆರಡೂ ಸೇರಿ ಈ ಹಣವನ್ನು ನೀಡಲಿವೆ. ನಗರ ವಲಸೆಯಿಂದಾಗಿ ಜಪಾನಿನ ಚಿಕ್ಕ ಚಿಕ್ಕ ಹಳ್ಳಿಗಳು, ಗ್ರಾಮೀಣ ಪ್ರದೇಶಗಳು ಹಾಗು ಸಣ್ಣ ನಗರಗಳಲ್ಲಿ ಜನಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ಪ್ರಮುಖ ನಗರ ಟೋಕಿಯೋದ ಮೇಲಿನ ಜನಸಂಖ್ಯಾ ಭಾರವನ್ನು ತಗ್ಗಿಸಲು ಈ ಕ್ರಮ ಕೈಗೊಂಡಿರುವುದಾಗಿ ಜಪಾನ್ ಸರ್ಕಾರಿ ಮೂಲಗಳು ತಿಳಿಸಿವೆ.
ಟೋಕಿಯೋ ವನ್ನು ತೊರೆಯುವವರಿಗೆ ಹಣ ಸಹಾಯ ಮಾಡಲಿರೋ ಜಪಾನ್, ಹಳ್ಳಿಗಳನ್ನು ಬಿಟ್ಟು ಪರ್ವತ ಪ್ರದೇಶಗಳಲ್ಲಿ ನೆಲೆಸುವವರಿಗೆ ಹೆಚ್ಚಿನ ಪರಿಹಾರ ನೀಡುವುದಾಗಿಯೂ ಹೇಳಿದೆ. ನಗರಗಳಲ್ಲಿನ ಒತ್ತಡ, ಮಾಲಿನ್ಯ ಇತ್ಯಾದಿಗಳನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯಕಾರಿಯಾಗಲಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಟೋಕಿಯೋದಲ್ಲಿ ಜನಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಈ ಭಾರವನ್ನು ಇನ್ನೂ ತಗ್ಗಿಸಲು ಜಾಪನ್ ಇಂಥಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ.