ಹತ್ಯೆ ಮಾಡುವ ವಿಚಾರ ಮಾತನಾಡಬಾರದು : ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಯತ್ನಾಳ್ ಬೇಸರ

ಬೆಂಗಳೂರು : 'ಟಿಪ್ಪು ರೀತಿಯಲ್ಲಿ ಸಿದ್ದರಾಮಯ್ಯರನ್ನು ಹೊಡೆದು ಹಾಕಿ' ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಶಾಸಕ ಬಸವನಗೌಡ ಆರ್ ಪಾಟೀಲ್ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದು, 'ಹತ್ಯೆ ಮಾಡುವ ವಿಚಾರ ಮಾತನಾಡಬಾರದು' ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಶಾಸಕ ಬಸವನಗೌಡ ಆರ್ ಪಾಟೀಲ್ ಯತ್ನಾಳ್ ಮಾತನಾಡಿ, ಟಿಪ್ಪು ರೀತಿಯಲ್ಲಿ ಸಿದ್ದರಾಮಯ್ಯರನ್ನು ಹೊಡೆದು ಹಾಕಿ. ಈ ರೀತಿಯ ಶಬ್ಧಗಳು ರಾಜಕಾರಣಕ್ಕೆ ಶೋಭೆ ತರಲ್ಲ, ಮೇಲಿಂದ ಮೇಲೆ ಟಿಪ್ಪು ಬಗ್ಗೆ ಸಿದ್ದರಾಮಯ್ಯ ಮಾತನಾಡ್ತಾರೆ. ಟಿಪ್ಪುವನ್ನು ಆದರ್ಶ ಮಾಡಿಕೊಂಡ್ರೆ ಸಶ್ಮಾನಕ್ಕೆ ಹೋಗ್ತಾರೆ. ಹತ್ಯೆ ಮಾಡುವ ವಿಚಾರ ಮಾತನಾಡಬಾರದು ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.