ಆಸ್ತಿ ವಿಚಾರ ಪ್ರಕರಣ; ಹೈಗ್ರೌಂಡ್ಸ್ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲು
ಬೆಂಗಳೂರು: ಆಸ್ತಿ ವಿಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರ್ಟ್ ತಡೆಯಾಜ್ಞೆ ಆದೇಶ ಇದ್ದಾಗಲೂ ಪ್ರಕರಣದಲ್ಲಿ ತೊಂದರೆ ನೀಡುತ್ತಿರುವುದಾಗಿ ಆರೋಪಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಇನ್ಸ್ಪೆಕ್ಟರ್ ಶಿವಸ್ವಾಮಿ ವಿರುದ್ಧ ದೂರು ನೀಡಿದ್ದಾರೆ.ಇನ್ಸ್ ಪೆಕ್ಟರ್ ವಿರುದ್ಧ ವಕೀಲ ಸಮದ್ ಖಾನ್ ಎಂಬವರು ಹೈಕೋರ್ಟ್ ಸಿಜೆ ಮತ್ತು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ. ಆಸ್ತಿ ವಿಚಾರ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದಾಗ್ಯೂ ಮೇರಿ ಎಲೆಜಬೆತ್ರನ್ನ ಸಂಜೆ ಮಹಿಳಾ ಸಿಬ್ಬಂದಿ ಇಲ್ಲದೆ ಅಕ್ರಮವಾಗಿ ಬಂಧಿಸಿ ಠಾಣೆಗೆ ಕರೆತಂದಿರುವ ಆರೋಪ ಮಾಡಲಾಗಿದ್ದು, ಪೊಲೀಸರ ನಡೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮೇರಿ ಎಲೆಜಬೆತ್ ಎಂಬುವವರ ಆಸ್ತಿ ವಿಚಾರ ಕೋರ್ಟ್ನಲ್ಲಿದೆ. ಈ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆಯೂ ನೀಡಿದೆ. ಅದಾಗ್ಯೂ ಯಾವುದೇ ದೂರು ದಾಖಲಾಗಿಲ್ಲವಾದರೂ ಮೇರಿ ಎಲೆಜಬೆತ್ ಅವರನ್ನ ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆಯೇ ಸಂಜೆ ವೇಳೆ ಬಂಧಿಸಿ ಠಾಣೆಗೆ ಕರೆತಂದಿರುವ ಆರೋಪ ಇನ್ಸ್ಪೆಕ್ಟರ್ ಶಿವಸ್ವಾಮಿ ವಿರುದ್ಧ ಮಾಡಲಾಗಿದೆ.