ಹಾಸನದಲ್ಲಿ ಮಿಕ್ಸಿ ಸ್ಪೋಟ ಪ್ರಕರಣ : ಪೊಲೀಸರಿಂದ ಓರ್ವ ಮಹಿಳೆ ಸೇರಿ ಇಬ್ಬರ ವಿಚಾರಣೆ

ಹಾಸನದಲ್ಲಿ ಮಿಕ್ಸಿ ಸ್ಪೋಟ ಪ್ರಕರಣ : ಪೊಲೀಸರಿಂದ ಓರ್ವ ಮಹಿಳೆ ಸೇರಿ ಇಬ್ಬರ ವಿಚಾರಣೆ

ಹಾಸನ : ಹಾಸನದಲ್ಲಿ ಮಿಕ್ಸಿ ಸ್ಪೋಟ ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಎಸ್ ಪಿ ಹರಿರಾಮ್ ಹೇಳಿದ್ದಾರೆ.

ಹಾಸನದ ಕೆ.ಆರ್.ಪುರಂ ರಸ್ತೆಯಲ್ಲಿರುವ ಅಂಗಡಿಯಲ್ಲಿ ನಿನ್ನೆ ಸಂಜೆ ಕೊರಿಯರ್ ಶಾಪ್ ಗೆ ಪಾರ್ಸಲ್ ಬಂದಿದ್ದ ಮಿಕ್ಸಿ ಸ್ಪೋಟಗೊಂಡು ಅಂಗಡಿ ಮಾಲೀಕ ಶಶಿ ಎಂಬುವರು ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಓರ್ವ ಮಹಿಳೆ ಸೇರಿ ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಸ್ಪೋಟದ ಬಳಿಕ ದೊರೆತ ಮಾಹಿತಿ ಆಧರಿಸಿ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್.ಪಿ ಹರಿರಾಮ್ ಮಾಹಿತಿ ನೀಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮೈಸೂರಿನ ಎಫ್ ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಪೋಟಗೊಂಡ ಸ್ಥಳದಲ್ಲಿ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗುತ್ತಿದೆ.