ಶಾಲೆಗಳಲ್ಲಿ 'ಬ್ಯಾಗ್ ಮುಕ್ತ ಶನಿವಾರ' ಪರಿಚಯಿಸಲು ಸರ್ಕಾರ ಶಿಫಾರಸ್ಸು

ಬೆಂಗಳೂರು-ಶಾಲಾ ವಿದ್ಯಾರ್ಥಿಗಳ ಭಾರವಾದ ಬ್ಯಾಗ್ ಗಳ ಕುರಿತ ಅಭಿಯಾನಗಳ ಪರಿಣಾಮ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 'ಬ್ಯಾಗ್ ಮುಕ್ತ ಶನಿವಾರ' ಪರಿಚಯಿಸಲು ಶಾಲೆಗಳಿಗೆ ಶಿಫಾರಸು ಮಾಡಿದೆ.
ಇಲಾಖೆಯ ಪ್ರಕಾರ, ಕಲಿಕಾ ಚೇತರಿಕೆ ಭಾಗವಾಗಿ ಈ ಉಪಕ್ರಮವನ್ನು ಪರಿಚಯಿಸಲಾಗಿದ್ದು, ಎಲ್ಲಾ ಶಾಲೆಗಳು ಪ್ರತಿ ತಿಂಗಳ ಒಂದು ಶನಿವಾರದಂದು ಸಂಭ್ರಮ ಶನಿವಾರ ಆಚರಿಸಲು ನಾವು ಸೂಚಿಸುತ್ತೇವೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಸಕ್ರಿಯ ಕಲಿಕೆಯನ್ನು ಉತ್ತೇಜಿಸಲು ಹತ್ತು ವಿಷಯಗಳಲ್ಲಿ ಚಟುವಟಿಕೆ ಪುಸ್ತಕಗಳನ್ನು ಬಳಸಬಹುದು ಎಂದು ಅದು ಹೇಳಿದೆ.
ಚಟುವಟಿಕೆ ಪುಸ್ತಕಗಳನ್ನು ಬಳಸಿಕೊಂಡು ಶಿಕ್ಷಕರು ಹೇಗೆ ಮುನ್ನಡೆಯಬಹುದು ಮತ್ತು ಮಕ್ಕಳಿಗೆ ಹೇಗೆ ಕಲಿಸಬಹುದು ಎಂಬ ಮಾರ್ಗದರ್ಶಿ ಪುಸ್ತಕವನ್ನು ಇಲಾಖೆಯು ಅಪ್‌ಲೋಡ್ ಮಾಡಿದೆ.ಕಡಿಮೆ ಸಂಖ್ಯೆಯ ಶಿಕ್ಷಕರಿರುವಾಗ ಶನಿವಾರದಂದು ಬ್ಯಾಗ್ ರಹಿತ ದಿನವಾಗಿರಬಹುದು. ಈ ಉಪಕ್ರಮವು ಕಲಿಕಾ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕಲಿಕೆಯ ಚೇತರಿಕೆಯ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದು ಇಲಾಖೆ ಹೇಳಿದೆ