ಭಾರತ Vs ಬಾಂಗ್ಲಾ: ನಾಳೆ ಕೊನೆಯ ಏಕದಿನ; ವೈಟ್ವಾಶ್ ತಪ್ಪಿಸುತ್ತ ಭಾರತ?

ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ ಕೊನೆಯ ಏಕದಿನ ಪಂದ್ಯದಲ್ಲಾದರೂ ಗೆಲುವಿನ ಲಯಕ್ಕೆ ಮರಳುತ್ತಾ ಎಂಬುದಕ್ಕೆ ಶನಿವಾರ ಉತ್ತರ ಸಿಗಲಿದೆ. ಉಭಯ ತಂಡಗಳ ನಡುವಿನ ಕೊನೆಯ ಏಕದಿನ ಪಂದ್ಯ ಚಿತ್ತಗಾಂಗ್ನಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಭಾರತ ತಂಡದ ಖಾಯಂ ನಾಯಕ ರೋಹಿತ್ ಬದಲಿಗೆ ಉಪನಾಯಕ ಕೆಎಲ್ ರಾಹುಲ್ ನಾ ಯಕತ್ವವಹಿಸಿಕೊಂಡಿದ್ದಾರೆ. ಪಂದ್ಯ ಡಿ. 10ರ ಬೆ. 11:30ಕ್ಕೆ ಆರಂಭವಾಗಲಿದೆ.