ಕಲಬುರಗಿ; ನಾಳೆ ಕಾಂಗ್ರೆಸ್‌ ಕಲ್ಯಾಣ ಕ್ರಾಂತಿ ಸಮಾವೇಶ

ಕಲಬುರಗಿ; ನಾಳೆ ಕಾಂಗ್ರೆಸ್‌ ಕಲ್ಯಾಣ ಕ್ರಾಂತಿ ಸಮಾವೇಶ

ಡಾ. ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್‌ ಕಮೀಟಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಡಿ.10ರಂದು ತವರು ಜಿಲ್ಲೆ ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭವನ್ನೇ ಕಲ್ಯಾಣದ 7 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಬಳಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಕಲಂ 371 (ಜೆ) ಈ ಭಾಗದಲ್ಲಿ ಜಾರಿಗೆ ಬಂದು ದಶಕ ಪೂರೈಸಿರುವ ಈ ಅವಧಿಯಲ್ಲಿ ಕಲ್ಯಾಣ ಕ್ರಾಂತಿ ಎಂಬ ಹೆಸರಲ್ಲಿ ಸಮಾವೇಶ ಆಯೋಜಿಸಿದೆ. ಎನ್‌ವಿ ಶಾಲೆಯ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.