ಚಿನ್ನ, ಬೆಳ್ಳಿ ಕದಿಯೋದು ಓಲ್ಡ್ ಸ್ಟೈಲ್ : 'BMTC' ಬಸ್ ನಿಂದ 167 ಲೀ. ಡೀಸೆಲ್ ಕದ್ದ ಖದೀಮರು

ಬೆಂಗಳೂರು : ಚಿನ್ನಾಭರಣ, ಹಣ ಕದಿಯುತ್ತಿದ್ದ ಖದೀಮರು ತಮ್ಮ ವರಸೆ ಬದಲಿಸಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬಿಎಂಟಿಸಿ ಬಸ್ ನಿಂದ ಡೀಸೆಲ್ ನನ್ನೇ ಕದ್ದಿದ್ದಾರೆ.
ಯಲಹಂಕ ನ್ಯೂಟೌನ್ನ ಬಿಎಂಟಿಸಿ ಘಟಕ-11, ಪುಟ್ಟೇನಹಳ್ಳಿ ಡಿಪೋದಲ್ಲಿ ನಿಲ್ಲಿಸಿದ್ದ ಎರಡು ಬಿಎಂಟಿಎಸ್ ಬಸ್ ನಿಂದ ಒಟ್ಟು 167 ಲೀಟರ್ ಡೀಸೆಲ್ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಘೋರ ಘಟನೆ : 10ನೇ ಮಹಡಿಯಿಂದ ಜಿಗಿದು 'PUC' ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು : 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಅಪಾರ್ಟ್ ಮೆಂಟ್ 10ನೇ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈಗೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಳನ್ನು ಸಂಜಯನಗರದ ಸಾಫ್ಟ್ವೇರ್ ಎಂಜಿನಿಯ ಅರವಿಂದ್ ಹಾಗೂ ತೇಜು ಕೌಶಿಕ್ ದಂಪತಿಯ ಪುತ್ರಿ ಪ್ರಕೃತಿ (18) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರಕೃತಿ ಚಾಲುಕ್ಯ ಸರ್ಕಲ್ ಸಮೀಪದ ಸೋಫಿಯಾ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದಳು. ಭಾನುವಾರ ಮಧ್ಯಾಹ್ನ ಹೊರಗೆ ಸುತ್ತಾಡಿಕೊ೦ಡು ಬರುವುದಾಗಿ ಹೇಳಿ ಹೊರಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಾಲುಕ್ಯ ವೃತ್ತದ ಹೈ ಪಾಯಿಂಟ್-3 ಅಪಾರ್ಟ್ಮೆಂಟ್ ಬಳಿ ಬಂದಿದ್ದಾಳೆ. ನಂತರ ಸೆಕ್ಯುರಿಟಿ ಗಾರ್ಡ್ ಗಾಗಿ ಸುಳ್ಳು ನೆಪ ಹೇಳಿ ಅಪಾರ್ಟ್ ಮೆಟ್ ಪ್ರವೇಶಿಸಿದ್ದಾಳೆ. ಬಳಿಕ ಲಿಫ್ಟ್ ಮುಖಾಂತರ 10ನೇ ಮಹಡಿ ತಲುಪಿ ಅಲ್ಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಬ೦ದ ಹೈಗೌಂಡ್ಸ್ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸಾಂದರ್ಭಿಕ ಚಿತ್ರ