ಕುಡಿದ ಮತ್ತಿನಲ್ಲಿ ಸ್ಕೂಟರ್ನಲ್ಲಿ ಹಿಮ್ಮುಖವಾಗಿ ಕುಳಿತು ಯುವತಿಯ ತುಂಟಾಟ: ವಿಡಿಯೋ ವೈರಲ್

ಬೆಂಗಳೂರು: ಪಾನಮತ್ತ ಯುವತಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಹಿಮ್ಮುಖವಾಗಿ ಕುಳಿತು ತುಂಟಾಟ ಮೆರೆದಿದ್ದಲ್ಲದೆ, ಸಂಚಾರ ನಿಯಮವನ್ನು ಉಲ್ಲಂಘಿಸಿದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಸ್ಕೂಟಿಯಲ್ಲಿ ಹಿಮ್ಮುಖವಾಗಿ ಕುಳಿತ ಯುವತಿ ಮತ್ತು ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿ ಹೆಲ್ಮೆಟ್ ಧರಿಸಿದೇ, ಸಿಟಿಯ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟರ್ ಚಲಾಯಿಸಿದ್ದಾರೆ.
ಕೇರಳ ನೋಂದಣಿಯ ಸ್ಕೂಟರ್ನಲ್ಲಿ ಕೈ-ಕಾಲುಗಳನ್ನು ಆಡಿಸುತ್ತಾ, ಮತ್ತಿನಲ್ಲಿ ಎಂಜಾಯ್ ಮಾಡುತ್ತಾ, ಅಪಾಯಕಾರಿಯಾಗಿ ಸ್ಕೂಟರ್ ಚಲಾಯಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶ ಮತ್ತು ನಿಲಾದ್ರಿ ನಗರದಲ್ಲಿ ಇಬ್ಬರು ಓಡಾಡಿದ್ದಾರೆ. ಯುವತಿಯರಿಬ್ಬರ ತುಂಟಾಟವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)