ರಾಯಚೂರು ಪಂಚರತ್ನ ಪ್ರಚಾರದ ವೇಳೆ JDSವಾಹನದ ಮೇಲೆ ಕಲ್ಲು ತೂರಾಟ : ಚಾಲಕನಿಗೆ ಗಾಯ

ರಾಯಚೂರು : ಮುಂದಿನ ವಿಧಾನ ಸಭಾ ಚುನಾವಣಾ ಪ್ರಚಾರಕ್ಕಾಗಿ ಜೆಡಿಎಸ್ ಪಂಚರತ್ನ ಪ್ರಚಾರ ಯಾತ್ರೆ ನಡೆಸಿತು ಈ ವೇಳೆ ವಾಹನದ ಮೇಲೆ ಕಲ್ಲುತೂರಿದ್ದು, ಚಾಲಕನ ತಲೆಗೆ ಗಂಭೀರ ಗಾಯಗೊಂಡ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ನಡೆದಿದೆ.
ಜೆಡಿಎಸ್ ಪಂಚರತ್ನ ಪ್ರಚಾರ ಯಾತ್ರೆಯ ವಾಹನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲುತೂರಾಟ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ದೇವದುರ್ಗ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ್ ಜಾಲಹಳ್ಳಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದು ದೂರು ನೀಡಿದ್ದಾರೆ.
ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಕರೆಮ್ಮ ನಾಯಕ್ ಒತ್ತಾಯಿಸಿ, ಜಾಲಹಳ್ಳಿ ಪೊಲೀಸ್ ಠಾಣೆ ಎದುರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದಾರೆ. ಈ ಕಲ್ಲುತೋರಾಟದಲ್ಲಿ ಗಾಯಗೊಂಡ ಚಾಲಕನನ್ನು ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಕಿತ್ಸೆ ಮುಂದುವರಿಸಲಾಗಿದೆ ಈ ಕಲ್ಲುತೋರಾಟ ನಡೆಸಿದ ಹಿನ್ನೆಲೆ ಪಂಚರತ್ನ ಪ್ರಚಾರ ಯಾತ್ರೆ ಭಾಗವಹಿಸಿದ ಕಾರ್ಯಕರ್ತರು ಆತಂಕಗೊಂಡಿ ಧಿಕ್ಕಾಪಾಲಾಗಿ ಓಡಿದ್ದಾರೆ.