ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನ್ಯೂನತೆ, ಶಿಕ್ಷಣ ಸಚಿವರ ರಾಜೀನಾಮೆ ನೀಡವೇಕು: ಈಶ್ವರ ಖಂಡ್ರೆ ಒತ್ತಾಯ

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನ್ಯೂನತೆ, ಶಿಕ್ಷಣ ಸಚಿವರ ರಾಜೀನಾಮೆ ನೀಡವೇಕು: ಈಶ್ವರ ಖಂಡ್ರೆ ಒತ್ತಾಯ

ಹುಬ್ಬಳ್ಳಿ:  ಪಠ್ಯಪುಸ್ತಕದಲ್ಲಿ ಆದ ನ್ಯೂನತೆಗಳನ್ನು ಸ್ವತಃ ಬಿಜೆಪಿ ಸರ್ಕಾರವೇ ಒಪ್ಪಿಕೊಂಡಿದೆ. ಕೂಡಲೇ ಶಿಕ್ಷಣ ಸಚಿವರು ನೈತಿಕತೆ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕದಲ್ಲಿ ಬಿಜೆಪಿ ಸರ್ಕಾರ ಪರಿಷ್ಕರಣೆ ಹೆಸರಿನಲ್ಲಿ ಅನಾಹುತ ಮಾಡಿದ್ದಾರೆ. ರೋಹಿತ ಚಕ್ರತೀರ್ಥ ಒಬ್ಬ ಮನೆ ಪಾಠ ಹೇಳುವವ ಅವನನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಮಾಡಿ ಇತಿಹಾಸ ತಿರುಚುವ ಕೆಲಸ ಮಾಡಿದೆ. ಸದ್ಯ ಎಲ್ಲೆಡೆ ನೈತಿಕ ಮೌಲ್ಯ, ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದೆ. ಈ ದಿಸೆಯಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಪಾಠಗಳನ್ನು ಪಠ್ಯದಲ್ಲಿ ಸೇರಿಸಬೇಕಿತ್ತು. ಆದರೆ ಬಿಜೆಪಿ ಸರ್ಕಾರ ಪಠ್ಯದಲ್ಲಿ ಧಾರ್ಮಿಕತೆ, ಜಾತಿಯ ವಿಷಬೀಜ ಬಿತ್ತುವ  ಕೆಲಸ ಮಾಡಿದೆ ಎಂದು ಆರೋಪಿಸಿದರು. 

ಪಠ್ಯ ಪರಿಷ್ಕರಣೆದಿಂದ ಬಿಜೆಪಿ ಸರ್ಕಾರ ರಾಜ್ಯದ 1 ಕೋಟಿ 30 ಲಕ್ಷ ಮಕ್ಕಳ ಭವಿಷ್ಯ ನಾಶ ಮಾಡಲು ಹೊರಟ್ಟಿದ್ದಾರೆ. ಕುವೆಂಪು, ಭಗತಸಿಂಗ್ ಸೇರಿದಂತೆ ನಾನಾ ನಾಯಕರ ಇತಿಹಾಸ ತಿರುಚುವ ಕೆಲಸ ಅಕ್ಷಮ್ಯ ಅಪರಾಧ. ಈವರೆಗೆ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಲ್ಲಾ, ಇವರ ದುರಾಡಳಿತದಿಂದ ರಾಜ್ಯದ ಏಳುವರೆ ಕೋಟಿ ಜನರು ರೋಸಿ ಹೋಗಿದ್ದಾರೆ ಎಂದು ಹರಿಹಾಯ್ದರು.