ಎನ್‍ಇಇಟಿ ಪರೀಕ್ಷೆಯಲ್ಲಿ ರೋಶನಿ ತರ್ಥಹಳ್ಳಿ ಬೆಳಗಾವಿಗೆ ಟಾಪರ್
ಬೆಳಗಾವಿಯ ಆಕಾಶ್ ಇನ್ಸ್ಟಿಟ್ಯೂಟ್‍ನ ವಿದ್ಯಾರ್ಥಿನಿ ರೋಶನಿ ತರ್ಥವಳ್ಳಿ ಅವರು ಪ್ರತಿಷ್ಠಿತ ರಾಷ್ಟ್ರೀಯ ಪ್ರವೇಶ ಪರೀಕ್ಷೆ (ಎನ್‍ಇಇಟಿ) ಯುಜಿ 2021ರಲ್ಲಿ ಎಐಆರ್ 103ನೇ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಗೌರವ ತಂದುಕೊಟ್ಟಿದ್ದಾರೆ. ರೋಶನಿಯವರು ನೀಟ್ ಪರೀಕ್ಷೆಯಲ್ಲಿ ಒಟ್ಟು 720 ಅಂಕಗಳಿಗೆ 705 ಪಡೆದರೆ, ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಮಹಮ್ಮದ್ ಕೈಫ್ ಮುಲ್ಲಾ ಅವರು, 720ರ ಪೈಕಿ 691 ಅಂಕ ಪಡೆದಿದ್ದಾರೆ. ಬೆಳಗಾವಿಯ ಆಕಾಶ್ ಇನ್ಸ್ಟಿಟ್ಯೂಟ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ರೋಶನಿ ತರ್ಥವಳ್ಳಿ ಮಾತನಾಡಿ, ಈ ಮಟ್ಟದಲ್ಲಿ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಲು ಕಾರಣವಾದ ಆಕಾಶ್ ಇನ್‍ಸ್ಟಿಟ್ಯೂಟ್‍ಗೆ ಆಭಾರಿಯಾಗಿದ್ದೇನೆ. ಸಂಸ್ಥೆಯು ನೀಡಿದ ಪಠ್ಯಗಳು ಮತ್ತು ತರಬೇತಿ ಇಲ್ಲದಿದ್ದರೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು. ಈ ವೇಳೆ ರೋಶನಿ ತರ್ಥವಳ್ಳಿ ಹಾಗೂ ಮಹಮ್ಮದ್ ಕೈಫ್ ಮುಲ್ಲಾ ಪಾಲಕರು ಉಪಸ್ಥಿತರಿದ್ದರು.