ಹುಬ್ಬಳ್ಳಿಯ ಬಿಆರ್ಟಿಎಸ್ ಬಸ್ ನಿಲ್ದಾಣದ ಬ್ಯಾರಿಕೇಡ್ಗೆ ಗುದ್ದಿದ ಲಾರಿ ಚಾಲಕ! ತಪ್ಪಿದ ಬಾರಿ ಅನಾಹುತ | Hubli |
ಕುಡಿದ ಅಮಲಿನಲ್ಲಿ ಲಾರಿ ಚಾಲಕನೊಬ್ಬ ಬಿಆರ್ಟಿಎಸ್ ಬಸ್ ನಿಲ್ದಾಣದ ಬ್ಯಾರಿಕೇಡ್ಗೆ ಗುದ್ದಿದ ಘಟನೆ, ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಮುಂದೆ ನಿನ್ನೆ ತಡರಾತ್ರಿ ನಡೆದಿದೆ. ಹೌದು, ಲಾರಿ ಚಾಲಕ ಕುಡಿದ ಮದ್ದಿನಲ್ಲಿ ಒನ್ ವೆ ಬಂದು, ಹಳೆ ಬಸ್ ನಿಲ್ದಾಣದ ಮುಂದೆ ಇರುವ ಬಿಆರ್ಟಿಎಸ್ ನಿಲ್ದಾಣದ ಬ್ಯಾರಿಕೇಡ್ ಗೆ ಗುದ್ದಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಆ ಲಾರಿ ಚಾಲಕನನ್ನು ತಳಿಸಿ, ಕೂಡಲೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ಲಾರಿ ಮತ್ತು ಚಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಚಾಲನೆಗೆ ಅಡ್ಡಿಯಾಗಿದ್ದ ಬ್ಯಾರಿಕೇಡ್ನ್ನು ಅಲ್ಲೆ ಇದ್ದ ಪೊಲೀಸರೊಬ್ಬರು ಕೊಯ್ದು ತೆಗೆದು, ವಾಹನಗಳ ಚಾಲನೆಗೆ ಅನುವು ಮಾಡಿಕೊಟ್ಟರು. ಚಾಲಕನ ಪರಿಜ್ಞಾನದಿಂದ ಬಾರಿ ಅನಾಹುತ ತಪ್ಪಿದೆ. ಈ ಕುರಿತು ಕಾಟನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.