ಉಳ್ಳಾಲ: ಪೊಲೀಸ್‌ ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಉಳ್ಳಾಲ: ಪೊಲೀಸ್‌ ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಳ್ಳಾಲ: ಅಸೈಗೋಳಿ ಕೆಎಸ್‌ಆರ್‌ಪಿಯ ಏಳನೇ ಬೆಟಾಲಿಯನ್‌ನ ಪೊಲೀಸ್‌ ಕಾನ್‌ಸ್ಟೆಬಲ್‌ ಅಸೈಗೋಳಿ ಸೈಟ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದಿದ್ದು, ಮಾನಸಿಕ ಖನ್ನತೆಯೆ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಳಗಾವಿ ಮೂಲದ ವಿಮಲನಾಥ ಜೈನರ್‌ (23) ಆತ್ಮಹತ್ಯೆ ಮಾಡಿಕೊಂಡವರು. 2021ರ ಕೊನೆಯಲ್ಲಿ ಕೆಎಸ್‌ಆರ್‌ಪಿಗೆ ಸೇರ್ಪಡೆಯಾಗಿದ್ದ ವಿಮಲನಾಥ್‌ ತರಬೇತಿ ಮುಗಿಸಿ ಕಳೆದ ನಾಲ್ಕೈದು ತಿಂಗಳ ಹಿಂದೆ ಅಸೈಗೋಳಿಯ ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ವರ್ಷದ ಹಿಂದೆ ತಾಯಿ ತೀರಿಕೊಂಡ ಅನಂತರ ಮಾನಸಿಕವಾಗಿ ಖನ್ನತೆಯಲ್ಲಿದ್ದ ಅವರು ರವಿವಾರ ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ಮನೆಯಲ್ಲೇ ಕೃತ್ಯ ಎಸಗಿದ್ದಾರೆ. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.