ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಹಾಗಾಗಿಯೇ ಇಂತಹ ಸಂಚು ಹಾಕಿರಬಹುದು | Yalahanka |

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಇಂದು ವಿಧಾನ ಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು ಯಲಹಂಕದಲ್ಲಿ ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಹಾಗಾಗಿಯೇ ಇಂತಹ ಸಂಚು ಹಾಕಿರಬಹುದು ಎಂದು ಹೇಳಿದ್ದಾರೆ.ಇನ್ನು ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ ಎಂದು ಹೇಳಿರುವ ಡಿ.ಕೆ.ಶಿವಕುಮಾರ್ ಮಾತನ್ನು ಸ್ವಾಗತಿಸುತ್ತೇನೆ ಆದರೆ ಇದೇ ಡಿಕೆಶಿ ನಾನು ರೌಡಿಗಳ ಜೊತೆಗಿದ್ದೇನೆಂದು ಹೇಳ್ತಿದ್ದಾರೆ. ಡಿಕೆಶಿ ಏನು ಸಾಧು-ಸಂತರ ಜೊತೆಯಲ್ಲಿದ್ದಾರಾ? ಅವರು ಯಾರ ಜೊತೆಗಿದ್ದಾರೆಂದು ನಾನು ಹೇಳುವುದಿಲ್ಲ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.