ರೀ ಸ್ವಾಮಿ ಬಸವನಗರ ಜನರ ಸಮಸ್ಯೆ ಸ್ವಲ್ಪ ಕೇಳ್ರಿ ಪ್ಪಾ... |Dharwad|
ಸ್ವಾತಂತ್ರ್ಯ ಸಿಕ್ಕು 75 ವರ್ಷ ಮುಗಿದಿದ್ದರೂ ನಮ್ಮ ದೇಶದ ಜನತೆಗೆ ಇನ್ನೂ ಕನಿಷ್ಠ ಮೂಲ ಸೌಕರ್ಯಗಳನ್ನೂ ಒದಗಿಸಲು ನಮ್ಮನ್ನಾಳುವ ಸರ್ಕಾರಗಳಿಗೆ ಆಗುತ್ತಿಲ್ಲ. ಎನ್ನೋ ಅಂತಿರಾ ಈ ಸ್ಟೋರಿ ನೋಡಿ...ಹೌದು ಯಾವುದೇ ಸರ್ಕಾರ ಬಂದರೂ ನಮ್ಮ ಜನ ಕೇಳುವುದು ಶುದ್ಧ ಕುಡಿಯುವ ನೀರು, ಸುಸಜ್ಜಿತ ರಸ್ತೆ, ಸಮರ್ಪಕ ವಿದ್ಯುತ್ ಹಾಗೂ ಶಿಕ್ಷಣ. ಇಷ್ಟೂ ಸೌಕರ್ಯಗಳನ್ನು ಒದಗಿಸಲು ಆಗದೇ ಇರುವ ಸರ್ಕಾರಗಳಿಗೆ ಇನ್ನೇನು ಅನ್ನಬೇಕು. ಅದಕ್ಕೆ ಪೂರಕವಾಗಿ ಧಾರವಾಡ ನಗರದಲ್ಲೇ ಇರುವ ಬಸವನಗರದ ಒಂದನೇ ಕ್ರಾಸ್ನ ಜನರ ಸಮಸ್ಯೆ ಸ್ವಲ್ಪ ಕೇಳಿಕೊಂಡು ಬರೋಣ ಬರ್ರಿ. ಇಲ್ನೋಡಿ ಕಿರಿದಾದ ರಸ್ತೆ. ರಸ್ತೆ ಇದುವರೆಗೂ ಕಾಂಕ್ರೀಟ್ ಇರಲಿ ಡಾಂಬರ್ ಕೂಡ ಕಂಡಿಲ್ಲ. ಮುಖಾಮುಖಿ ಬೈಕ್ ಬಂದರೆ ಪಕ್ಕಕ್ಕೆ ಸರಿಯಲು ಜಾಗವೇ ಇಲ್ಲದಾಗಿದೆ.ಈ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅಲ್ಲಿನ ಜನ ಸಾಕಷ್ಟು ಹೇಳಿದರೂ ಯಾರೊಬ್ಬರು ಕೂಡ ಈ ಸಮಸ್ಯೆಯತ್ತ ಗಮನಹರಿಸಿಯೇ ಇಲ್ಲ. ಬಸವನಗರ ಒಂದನೇ ಕ್ರಾಸ್ ರಸ್ತೆ ಇಕ್ಕೆಲದಲ್ಲಿದೆ. ರಸ್ತೆ ಅಗಲೀಕರಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ. ಇನ್ನು ಬೀದಿ ದೀಪಗಳಂತೂ ಇಲ್ಲಿ ಇಲ್ಲವೇ ಇಲ್ವಂತೆ. ಇದೇ ಏರಿಯಾದಲ್ಲಿ ವಿದ್ಯಾನಿಧಿ ವಿದ್ಯಾರ್ಥಿ ವಸತಿ ನಿಲಯ ಕೂಡ ಇದೆ. ಇದರ ಮಾಲೀಕರು ಸಿಡಿಪಿಆರ್ ಮ್ಯಾಪ್ ಪ್ರಕಾರ ರಸ್ತೆಗಾಗಿ ಜಾಗ ಬಿಡಬೇಕಿತ್ತು. ಅಷ್ಟು ಜಗವನ್ನು ಬಿಡದೇ ಶಾಲೆ ಕಟ್ಟಿಕೊಂಡಿದ್ದಾರೆ. ಇದರಿಂದ ರಸ್ತೆ ಕಿರಿದಾಗಿದೆ. ರಸ್ತೆಯಲ್ಲಿ ಅಡ್ಡಾಡುವುದೇ ಕಠಿಣವಾಗಿದೆ ಎಂದು ಸ್ಥಳೀಯರಾದ ಸುಧೀರ್ ಕ್ಷತ್ರೀಯ ಹೇಳಿದರು. ಒಟ್ಟಾರೆಯಾಗಿ ಇಲ್ಲಿನ ನಿವಾಸಿಗಳು ಪಾಲಿಕೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಮಸ್ಯೆಗಳ ಸರಮಾಲೆಯನ್ನೇ ಅನುಭವಿಸುವಂತಾಗಿದೆ. ಕಾನೂನು ಪ್ರಕಾರ ರಸ್ತೆಗಾಗಿ ಜಾಗ ಬಿಡಬೇಕು. ಅದನ್ನು ಬಿಡದೇ ವಿದ್ಯಾನಿಧಿ ಸಂಸ್ಥೆಯವರು ಬಿಲ್ಡಿಂಗ್ ಕಟ್ಟಿಕೊಂಡಿದ್ದಾರೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯವಾಗಿದೆ.