ಪ್ರೇಯಸಿ ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದಳೆಂದು ಟವರ್ ಹತ್ತಿದ ಭೂಪ

ಗರ್ಲ್ ಫ್ರೆಂಡ್ ತನ್ನ ಮೊಬೈಲ್ ನಂಬರ್ ಬ್ಯಾಕ್ ಮಾಡಿದ್ದಾಳೆಂದು ಯುವಕ ಕೋಪದಿಂದ ಮೊಬೈಲ್ ಟವರ್ ಹತ್ತಿರುವ ಘಟನೆ ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ. ಗೆಳತಿ ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾಳೆಂದು ಕೋಪಕೊಂಡ ಯುವಕ, ಮೊಬೈಲ್ ಟವರ್ ಹತ್ತಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲೇ ಜಮಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯುವಕನ ಗೆಳತಿಯೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾರೆ. ನಂತರ ಯುವಕ ಟವರ್‌ನಿಂದ ಕೆಳಗಿಳಿದಿದ್ದಾನೆ.