ಮರಕ್ಕೆ ಕಾರು ಡಿಕ್ಕಿ: ಮೆಸ್ಕಾಂ ಜೆಇ ಸೇರಿ ಇಬ್ಬರ ದುರ್ಮರಣ, ಮದುವೆ ಮನೆಯಲ್ಲಿ ಸೂತಕ

ಮರಕ್ಕೆ ಕಾರು ಡಿಕ್ಕಿ: ಮೆಸ್ಕಾಂ ಜೆಇ ಸೇರಿ ಇಬ್ಬರ ದುರ್ಮರಣ, ಮದುವೆ ಮನೆಯಲ್ಲಿ ಸೂತಕ

ಚಿಕ್ಕಮಗಳೂರು: ಅಜ್ಜಂಪುರದ ಮಾಕನಹಳ್ಳಿಯಲ್ಲಿ ಚಾಲಕನ ನಿಯಂತ್ರಣತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿದ್ದು, ಮೆಸ್ಕಾಂನ ಜೆಇ ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಕಿರಣ್(32) ಹಾಗೂ ಅಜ್ಜಂಪುರ ತಾಲೂಕಿನ ಶಿವನಿ ಮೂಲದ ನಾಗರಾಜ್ (40) ಮೃತ ದುರ್ದೈವಿಗಳು.

ಕಿರಣ್​ ಶಿವನಿ ಮೆಸ್ಕಾಂನಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದರು. ಫೆ.8ರಂದು ಕಿರಣ್​ಗೆ ಮದುವೆ ನಿಗದಿಯಾಗಿತ್ತು. ಎಲ್ಲವೂ ಚೆನ್ನಾಗಿದ್ದರೆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿದ್ದು. ಆದರೆ ಇವರ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲೀಗ ಸೂತಕ ಛಾಯೆ ಆವರಿಸಿದೆ.