ಕುಂದುಕೊರತೆಗಳ ಸಭೆ; ಲೈಸೆನ್ಸ್ ಕಡ್ಡಾಯ
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ತಾಲ್ಲೂಕು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕುಂದುಕೊರತೆಗಳ ಸಭೆಯನ್ನು ಚಿಕ್ಕಬಳ್ಳಾಪುರ ನಗರದ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆ ಉದ್ದೇಶಿಸಿ ಮಾತನಾಡಿದ ಪಾರ್ಟಿ ಮಂಜುನಾಥ್, ಆಟೋ ಚಾಲಕರು ಕಡ್ಡಾಯವಾಗಿ ಆಟೋ ದಾಖಲಾತಿಗಳನ್ನು ಮತ್ತು ಚಾಲಕರ ಲೈಸೆನ್ಸ್ ಪಡೆಯದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನು ಮೊಬೈಲ್ ಬಾಬು ಅವರು ವಿಶೇಷವಾಗಿ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೂಕ್ತ ಸೇವೆ ಒದಗಿಸಬೇಕು ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಡಾಂಬು ಶ್ರೀನಿವಾಸ್, ಸಮಾಜ ಸೇವಕ ರಾಮಣ್ಣ, ಕಲೀಲ್ ಕೃಷ್ಣಪ್ಪ ರಾಮಣ್ಣ ಮುನಿರಾಜು ಬಾಬು ಸತ್ಯನಾರಾಯಣ ಪಟ್ರೇನಹಳ್ಳಿ ಮುನಿರಾಜು ಸುರೇಶ್ ಬಾಬು ಮತ್ತು ಇನ್ನಿತರ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಮತ್ತು ಮಾಲೀಕರು ಪಾಲ್ಗೊಂಡಿದ್ದರು.