ಬ್ಯಾಂಕ್ ಲಾಕರ್ ನವೀಕರಣ ಗೊಂದಲ; ಗ್ರಾಹಕರು ಕಂಗಾಲು

ಬ್ಯಾಂಕ್ ಲಾಕರ್‌ಗಳ ನಿರ್ವಹಣೆಗೆ ಸಂಬಂಧಿಸಿ ಜಾರಿಗೆ ಬಂದಿರುವ ಹೊಸ ನಿಯಮಗಳು ಬಳಕೆದಾರರನ್ನು ಗೊಂದಲಕ್ಕೆ ಸಿಲುಕಿಸಿದೆ. ಹೀಗಾಗಿ ಮುಂಬಯಿ ಸೇರಿ ದೇಶದ ಹಲವೆಡೆ ಸ್ಟಾಂಪ್ ಪೇಪರ್ ಖರೀದಿಗೆ ಜನ ಸರದಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಚಾಲ್ತಿಯಲ್ಲಿರುವ ಬಳಕೆದಾರರಿಗೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಇಲ್ಲ. ವಿಶೇಷವಾಗಿ ಸ್ಟಾಂಪ್ ಪೇಪರ್ ಬಳಕೆ ವಿಚಾರದಲ್ಲಿ ಈ ಗೊಂದಲ ಉಂಟಾಗಿದೆ ಎಂದು ಹಲವರು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.