ಗುರಿಗೆ ತಕ್ಕಂತೆ ಪರಿಶ್ರಮ ಇದ್ದರೆ ಸಾಧನೆ ಸಾಧ್ಯ

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪ ದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆ (ರಿ) ಶಿಗ್ಗಾಂವಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕೀರೇಶ ಮಾಸ್ತರ ಕೊಂಡಾಯಿ ಮಾತನಾಡಿ, ಗುರಿಯಿಟ್ಟುಕೊಂಡು ಹೋಗಿ ನಿರಂತರ ಪ್ರಯತ್ನ ಮಾಡಿದಾಗ ನಮ್ಮ ಗುರಿಯನ್ನು ನಾವು ಸಾಧಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯವನ್ನು ಸಂಗನ ಬಸವ ಸ್ವಾಮಿಗಳು ವಹಿಸಿದರು. ಅಧ್ಯಕ್ಷತೆ ಯನ್ನು ಕೊಟ್ರೇಶ ಮಾಸ್ತರ ಬೆಳಗಲಿ ವಹಿಸಿದರು, ಪ್ರಾಚಾರ್ಯರ ಡಾ.ನಾಗರಾಜ ದ್ಯಾಮನಕೊಪ್ಪ, ಶಿವಾನಂದ ಮ್ಯಾಗೇರಿ, ಎಮ್.ಎಸ್.ಮಾಳವಾಡ, ರಮೇಶ ಸಾತಣ್ಣವರ, ತಿಪ್ಪಣ್ಣ ಸಾತಣ್ಣವರ, ಪ್ರೇಮಾ ಪಾಟೀಲ, ಬಸನಗೌಡ ಮೇಲಿನಮನಿ, ಶಿವಾನಂದ ಬಾಗೂರ, ಪ್ರಕಾಶ ಹಾದಿಮನಿ, ಶಂಕರ ಅರ್ಕಸಾಲಿ, ಭರಮಜ್ಜ ನವಲಗುಂದ, ಟಾಕನಗೌಡ ಪಾಟೀಲ, ಎಸ್.ಕೆ.ಹೂಗಾರ, ಬಸವರಾಜ ಚಲವಾದಿ,ವೀರುಪಾಕ್ಷಪ್ಪ ಬಗಾಡೆ, ಬಸವರಾಜ ಶಿಗ್ಗಾಂವಿ, ಉಮೇಶ ಅಂಗಡಿ, ರೇಣುಕಗೌಡ ಪಾಟೀಲ, ಶಂಕ್ರಣ್ಣ ಅಯ್ಯಣ್ಣವರ, ಶರೀಫ ಮಾಕಪ್ಪನವರ, ಶಂಕ್ರಣ್ಣ ಮುಂದಿನ ಮನಿ, ನಾಗರಾಜ ಬಡಿಗೇರ ಹಲವಾರು ಕಲಾವಿದರು, ಗಣ್ಯರು ಉಪಸ್ಥಿತರಿದ್ದರು.