ಕೊರೊನಾಕ್ಕೆ ಕ್ಯಾರೇ ಎನ್ನದ ಗಡಿ ಭಾಗದ ಜನರು | Bidar |
ಬೀದರ್ ಗಡಿ ಜಿಲ್ಲೆ ಬೀದರ್ನಲ್ಲಿ ವೀಕೆಂಡ್ ಕರ್ಫ್ಯೂಗೆ ನಾಗರಿಕರು ಕ್ಯಾರೇ ಎನ್ನದೇ ಎಂದಿನಂತೆ ಎಲ್ಲೆಂದರಲ್ಲಿ ಓಡಾಟ, ವ್ಯಾಪಾರ ವಹಿವಾಟು ನಡೆಯುವುದರೊಂದಿಗೆ ಕೊರೊನಾಕ್ಕೆ ಕ್ಯಾರೇ ಎನ್ನದೇ ಜನರು ನಿರ್ಭೀತಿಯಿಂದ ಓಡಾಡುತ್ತಿರುವ ದೃಶ್ಯ ಕಂಡು ಬಂದಿತು. ವೀಕೆಂಡ್ ಕರ್ಪ್ಯೂಗೆ ಯಾವುದೇ ರೀತಿಯ ಸಕಾರತ್ಮಕ ಸ್ಪಂದನೆ ಕಂಡು ಬಾರದಿರುವುದು ಆಡಳಿತ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಹೋಟಲ್, ಕಿರಾಣಾ ಸ್ಟೋರ್ ಬೇಕರಿ ಎಲ್ಲವು ಮುಕ್ತವಾಗಿದ್ದು ಕಂಡು ಬಂದಿತು. ಒಟ್ಟಿನಲ್ಲಿ ಸರಕಾರ ಕೊರೊನಾ ತಡೆಯುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿರುವಾಗ ಜನರು ಅದನ್ನು ಅರಿತು ನಿಯಮ ಪಾಲಿಸಿದಲ್ಲಿ ಕೊರೊನಾ ತಡೆಯಲು ಸಾಧ್ಯವೆಂಬುದನ್ನು ಮರೆಯಬಾರದು. ಇದು ಅವರ ಜೀವದ ಅಳಿವು -ಉಳಿವಿನ ಪ್ರಶ್ನೆ ಎಂಬುದನ್ನಾದರೂ ಅರಿತು ಕೋವಿಡ್ ನಿಯಮಗಳನ್ನು ಪಾಲಿಸಬೇಕಿದೆ.