ಬೇಂದ್ರೆ ಬಸ್‌ಗಳಿಗೆ ಪರ್ಯಾಯ ಮಾರ್ಗ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ
ಬೇಂದ್ರೆ ಬಸ್‌ಗಳಿಗೆ ಪರ್ಯಾಯ ಮಾರ್ಗ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ
ಹುಬ್ಬಳ್ಳಿ: ಅವಳಿ ನಗರಗಳ ಮಧ್ಯ ಕಾರ್ಯಾಚರಣೆ ಯಲ್ಲಿರುವ ಬೇಂದ್ರೆ ಸಾರಿಗೆಯ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ನೀಡಿರುವ ಸಾರಿಗೆ ಇಲಾಖೆಯ ಅಧಿಸೂಚನೆ ಪ್ರಶ್ನಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.
ಸರಕಾರ ಬೇಂದ್ರೆ ಸಾರಿಗೆಗೆ ಪರ್ಯಾಯ ಮಾರ್ಗಗಳನ್ನು ನೀಡುವ ಕುರಿತು ವಾಕರಸಾ ಸಂಸ್ಥೆಯಿAದ ತಕರಾರು ಇರುವ ಬಗ್ಗೆ ಈಗಾಗಲೇ ಸಾರಿಗೆ ಇಲಾಖೆಯ ಗಮನಕ್ಕೆ ತರಲಾಗಿತ್ತು. ಆದಾಗ್ಯೂ ಜು. ೨೦, ೨೦೨೧ರಂದು ಸಾರಿಗೆ ಇಲಾಖೆ ಹೊರಡಿಸಿದ ಅಧಿಸೂಚನೆ ಮೇರೆಗೆ ಬೇಂದ್ರೆ ಸಾರಿಗೆಯ ೪೧ ವಾಹನಗಳಿಗೆ ಪರ್ಯಾಯ ಮಾರ್ಗಗಳಾದ ಬೆಳಗಾವಿ-ಅಥಣಿ-ವಿಜಯಪುರ-೧೫, ಹುಬ್ಬಳ್ಳಿ-ಬಾಗಲಕೋಟೆ ವಿಜಯಪುರ-೧೫ ಹಾಗೂ ಹುಬ್ಬಳ್ಳಿ-ಗದಗ ನಡುವೆ ೧೧ ಒಟ್ಟು ೪೧ ವಾಹನಗಳಿಗೆ ಸಂಚರಿಸಲು ಅನುಮತಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ಬೆಳಗಾವಿ-ವಿಜಯಪುರ-ಗದಗ ಮಾರ್ಗಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳು ಈಗಾಗಲೇ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೇವೆ ಒದಗಿಸುತ್ತಿದ್ದು, ಸಂಸ್ಥೆಗೆ ಉತ್ತಮ ಆದಾಯ ಗಳಿಸುವ ಮಾರ್ಗಗಳಾಗಿರುತ್ತವೆ. ಆದ್ದರಿಂದ ಈ ಕುರಿತು ಜು.೨೦, ೨೦೨೧ರಂದು ಹೊರಡಿಸಿದ ಸಾರಿಗೆ ಇಲಾಖೆಯ ಅಧಿಸೂಚನೆಯ ಆದೇಶವನ್ನು ಪ್ರಶ್ನಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಕರ್ನಾಟಕದ ರಾಜ್ಯದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನಂತರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮನವಿಯನ್ನು ಪುರಸ್ಕರಿಸುವುದರೊಂದಿಗೆ, ಪ್ರಸ್ತುತ ಇದ್ದ ಯಥಾಸ್ಥಿತಿ ಮುಂದುವರಿಸುವAತೆ ಆ.೧೧, ೨೦೨೧ರಂದು ಹೈಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗಗಳಲ್ಲಿ ಯಾವುದೇ ರಹದಾರಿ ಪರವಾನಗಿ) ಪತ್ರಗಳನ್ನು ನೀಡದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿAದ ಸಂಬAಧಿಸಿದ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.