ಬ್ಯಾಂಕ ಕಳ್ಳತನ ವಿಫಲ ಪ್ರಯತ್ನ
ಹುಬ್ಬಳ್ಳಿಯ ಗೋಕುಲ ರಸ್ತೆಯ ನೆಹರು ನಗರದಲ್ಲಿರುವ ಐ. ಡಿ. ಬಿ. ಆಯ್ ಬ್ಯಾಂಕ ಕಳ್ಳತನ ಮಾಡುವ ವಿಫಲ ಪ್ರಯತ್ನ ಒಂದು ನಡೆದಿದೆ. ಕಳೆದ ರಾತ್ರಿ ಐ. ಡಿ. ಬಿ. ಆಯ್ ಬ್ಯಾಂಕ ಕಳ್ಳತನ ಮಾಡಲು 4 ಜನರ ಖದೀಮರ ತಂಡ ಆನಲಾಯಿನ್ ಮೂಲಕ ಕಳ್ಳತನಕ್ಕೆ ಬೇಕಾಗುವ ವಸ್ತು ಗಳನ್ನು ಖರೀದಿಸಿ ದರೋಡೆಗೆ ಮುಂದಾಗಿದೆ. ಆದರೆ ಇದೇ ಸಮಯದಲ್ಲಿ ಜೋರಾಗಿ ಸೈರನ್ ಆಗಿದ್ದರಿಂದ ಖದೀಮರು ಅಲ್ಲೇ ತಮ್ಮ ವಸ್ತುಗಳನ್ನು ಬಿಟ್ಟು ಪರಾರಿಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಗೋಕುಲ್ ರೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡ್ಡಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಇನಸ್ಪೆಕ್ಟರ ಕಾಲಿಮಿರ್ಚಿ 48 ಘಂಟೆಗಳಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.